ಇನ್ಮುಂದೆ ದೇಶಾದ್ಯಂತ ಚಿನ್ನಕ್ಕೆ ಒಂದೇ ಬೆಲೆ, ಹೊಸ ನಿಯಮ ಜಾರಿ, ಚಿನ್ನದ ದರ ಇಳಿಕೆ ಆಗುತ್ತಾ?

ನಮಸ್ಕಾರ ಕರ್ನಾಟಕ,ಒಂದು ದೇಶ ಒಂದು ಚುನಾವಣೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ದೇಶದ ಎಲ್ಲೆಡೆ ಚಿನ್ನಕ್ಕೆ ಒಂದೇ ಬೆಲೆ ನಿಗದಿಪಡಿಸಲು ಚಿಂತನೆ ನಡೆದಿದೆ (One Nation One Rate). ಈಗ ಚಿನ್ನಕ್ಕೆ ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಬೆಲೆಯಿದೆ (Gold Rate).

ಪ್ರತಿ ರಾಜ್ಯದ ವಿಭಿನ್ನ ತೆರಿಗೆಗಳ ಹೊರತಾಗಿ ವಿವಿಧ ಅಂಶಗಳು ಪರಿಣಾಮ ಬೀರುವುದರಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಈ ವ್ಯತ್ಯಾಸ ಕಂಡು ಬರುತ್ತಿದೆ. ಇದೀಗ ಈ ನಿಯಮದಲ್ಲಿ ಬದಲಾವಣೆ ಕಂಡು ಬರಲಿದ್ದು, ಶೀಘ್ರದಲ್ಲೇ ‘ಒಂದು ರಾಷ್ಟ್ರ, ಒಂದು ದರ’ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ನಿಯಮ ಜಾರಿಗೆ ಬಂದರೆ ನೀವು ದೇಶದಲ್ಲಿ ಎಲ್ಲಿಯಾದರೂ ಒಂದೇ ದರದಲ್ಲಿ ಚಿನ್ನ ಖರೀದಿಸಬಹುದು. ಇದರಿಂದ ಗ್ರಾಹಕರ ಜತೆಗೆ ಚಿನ್ನದ ವ್ಯಾಪಾರಿಗಳು ಮತ್ತು ಆಭರಣ ವ್ಯಾಪಾರಿಗಳು ಅನುಕೂಲವಾಗಲಿದೆ. ಈಗಾಗಲೇ ದೇಶಾದ್ಯಂತದ ಎಲ್ಲ ದೊಡ್ಡ ದೊಡ್ಡ ಆಭರಣ ವ್ಯಾಪಾರಿಗಳು ಇದನ್ನು ಕಾರ್ಯಗತಗೊಳಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದರಿಂದ ಚಿನ್ನದ ಬೆಲೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ‘ಒಂದು ರಾಷ್ಟ್ರ, ಒಂದು ದರ’ ನೀತಿಗೆ ರತ್ನ ಮತ್ತು ಆಭರಣ ಮಂಡಳಿ (Gem and Jewellery Council) ಸಹ ಬೆಂಬಲ ಸೂಚಿಸಿದೆ. ದೇಶಾದ್ಯಂತ ಚಿನ್ನದ ಏಕರೂಪದ ಬೆಲೆ ಜಾರಿಗೊಳಿಸುವುದು ಇದರ ಉದ್ದೇಶ ಎಂದು ಮೂಲಗಳು ತಿಳಿಸಿವೆ.

2024ರ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಅಧಿಕೃತ ಘೋಷಣೆ ಹೊರ ಬೀಳಲಿದೆ. ಈ ನೀತಿ ಜಾರಿಗೆ ತಂದ ನಂತರ ಕಂಡುಬರುವ ಸವಾಲುಗಳನ್ನು ಎದುರಿಸಲು ಚಿನ್ನದ ಉದ್ಯಮವು ಈಗಾಗಲೇ ಯೋಜನೆಯನ್ನು ರೂಪಿಸುತ್ತಿದೆ.

ʼʼಈ ಯೋಜನೆಯಡಿ ದೇಶಾದ್ಯಂತ ಚಿನ್ನದ ಬೆಲೆಯನ್ನು ಏಕರೂಪಗೊಳಿಸಲು ಕೇಂದ್ರ ಸರ್ಕಾರ ಬಯಸಿದೆ. ಈ ನಿಯಮ ಜಾರಿಗೆ ತಂದ ನಂತರ ನೀವು ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ ಅಥವಾ ಕೋಲ್ಕತ್ತಾದಂತಹ ಮೆಟ್ರೋ ನಗರ ಅಥವಾ ಮಂಗಳೂರು, ಹುಬ್ಬಳ್ಳಿಯಂತಹ ಸಣ್ಣ ನಗರದಲ್ಲಿ ಚಿನ್ನವನ್ನು ಖರೀದಿಸಿದರೆ ಒಂದೇ ಬೆಲೆಯನ್ನು ಪಾವತಿಸಬೇಕಾಗುತ್ತದೆ.

ಸರ್ಕಾರವು ರಾಷ್ಟ್ರೀಯ ಬುಲಿಯನ್ ಎಕ್ಸ್‌ಚೇಂಜ್‌ ರಚಿಸಲಿದ್ದು, ಇದು ಎಲ್ಲೆಡೆ ಚಿನ್ನದ ಸಮಾನ ಬೆಲೆಗಳನ್ನು ನಿಗದಿಪಡಿಸಲಿದೆ. ಆಭರಣ ವ್ಯಾಪಾರಿಗಳು ಈ ಬೆಲೆಗೆ ಚಿನ್ನವನ್ನು ಮಾರಾಟ ಮಾಡಬೇಕಾಗುತ್ತದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿನ್ನದ ಬೆಲೆ ಕಡಿಮೆಯಾಗಬಹುದು: ಈ ನಿಯಮದ ಅನುಷ್ಠಾನದೊಂದಿಗೆ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ. ಇದಲ್ಲದೆ ಚಿನ್ನವನ್ನು ಮಾರಾಟ ಮಾಡಲು ಅನೇಕ ಬಾರಿ ಅನಿಯಂತ್ರಿತ ಬೆಲೆಗಳನ್ನು ವಿಧಿಸುವ ಆಭರಣ ವ್ಯಾಪಾರಿಗಳನ್ನು ಸಹ ಹತೋಟಿಗೆ ತರಲು ಸಾಧ್ಯವಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಚಿನ್ನದ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಅನುಕೂಲಗಳೇನು?

ಹೆಚ್ಚಿದ ಪಾರದರ್ಶಕತೆ: ಒಂದೇ ಚಿನ್ನದ ದರವು ಎಲ್ಲ ಕಡೆಯ ಗ್ರಾಹಕರಿಗೆ ಸಮಾನವಾಗಿರುತ್ತದೆ.

ಹೆಚ್ಚು ಪರಿಣಾಮಕಾರಿ: ಬೆಲೆಗಳನ್ನು ಸುವ್ಯವಸ್ಥಿತಗೊಳಿಸುವುದರಿಂದ ಚಿನ್ನದ ಮಾರುಕಟ್ಟೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಸಂಭಾವ್ಯ ಬೆಲೆ ಕಡಿತ: ಬೆಲೆ ಅಸಮಾನತೆಯನ್ನು ನಿವಾರಿಸುವುದು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಬಹುದು.

ಮಧ್ಯಸ್ಥಿಕೆ ತೆಗೆದುಹಾಕುವುದು: ಏಕೀಕೃತ ಬೆಲೆಯು ಮಧ್ಯವರ್ತಿಗಳನ್ನು ತೆಗೆದುಹಾಕುತ್ತದೆ.

ಸಮಾನತೆ: ಈ ನಿಯಮ ದೇಶಾದ್ಯಂತದ ಎಲ್ಲ ಆಭರಣ ವ್ಯಾಪಾರಿಗಳಿಗೆ ನ್ಯಾಯಯುತ ಸ್ಪರ್ಧಾತ್ಮಕ ವಾತಾವರಣವನ್ನು ಒದಗಿಸುತ್ತದೆ.

ಇತರೆ ವಿಷಯಗಳು :

ಚಿನ್ನದ ಗ್ರಾಹಕರಿಗೆ ಗುಡ್ ನ್ಯೂಸ್, ಐದು ದಿನಗಳ ಬಳಿಕ ಇಳಿಕೆಯಾದ ಚಿನ್ನದ ಬೆಲೆ, 1 ಗ್ರಾಂ ಗೋಲ್ಡ್ ಬೆಲೆ ಮಾಹಿತಿ ಇಲ್ಲಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, 7ನೇ ರಾಜ್ಯ ವೇತನ ಆಯೋಗ ಜಾರಿಯಾದ್ರೆ ವೇತನ ಎಷ್ಟು ಹೆಚ್ಚಾಗಲಿದೆ?

Leave a Reply

Your email address will not be published. Required fields are marked *

rtgh