ನಮಸ್ಕಾರ ಕರ್ನಾಟಕ, ನಮ್ಮೆಲ್ಲರ ಮನೆಗೆ ಮಾದರಿ ಈರುಳ್ಳಿ ಅಗತ್ಯವಾಗಿರುತ್ತೆ. ಇಲ್ಲದೇ ಅಡುಗೆಯೇ ಕಲ್ಪಿಸಲಾಗದು. ಈರುಳ್ಳಿ ಇಲ್ಲದೆ ಅಡುಗೆ ಸ್ವಾದಿಸದು.
ಈರುಳ್ಳಿ ಬೆಲೆ ನಿರಂತರವಾಗಿ ಬದಲಾಯಿಸುತ್ತಾ ಇರುತ್ತದೆ – ಕೆಲವೊಮ್ಮೆ ಬೆಲೆ ಏರುತ್ತವೆ, ಕೆಲವೊಮ್ಮೆ ಕುಸಿಯುತ್ತವೆ. ದೊಡ್ಡ ರೈತರು ಈ ಸಂದರ್ಭದಲ್ಲಿ ಶೆಡ್ ಗಳಲ್ಲಿ ಈರುಳ್ಳಿಯನ್ನು ಸಂಗ್ರಹಿಸಿ, ಬೆಲೆ ಏರಿದಾಗ ಮಾರಾಟ ಮಾಡಿ ಲಾಭ ಪಡೆಯುತ್ತಾರೆ. ಆದರೆ, ಸಣ್ಣ ರೈತರಿಗೆ ಇದು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕುತ್ತಾರೆ.
ಈರುಳ್ಳಿ ಹೆಚ್ಚು ತೇವಾಂಶ ಹೊಂದಿದ ಬೆಳೆಯಾದ್ದರಿಂದ ಬೇಗನೇ ಹಾಳಾಗುತ್ತದೆ. ಇದನ್ನು ಗಮನಿಸಿ, ಕರ್ನಾಟಕ ಸರ್ಕಾರ ರೈತರಿಗೆ ಈರುಳ್ಳಿಯನ್ನು ಶೇಖರಣೆ ಮಾಡಲು ಶೆಡ್ ನಿರ್ಮಿಸಲು ಸಹಾಯಧನ ನೀಡಲು ಮುಂದಾಗಿದೆ.
ಈ ಯೋಜನೆಯಡಿ, ರೈತರು 3-4 ತಿಂಗಳವರೆಗೆ ಈರುಳ್ಳಿಯನ್ನು ಶೇಖರಣೆ ಮಾಡಿ, ಬೆಲೆ ಏರಿದಾಗ ಮಾರಾಟ ಮಾಡಿ ಲಾಭ ಪಡೆಯಬಹುದು.

ಸಹಾಯಧನ ಪಡೆಯಲು ಬೇಕಾದ ದಾಖಲೆಗಳು:
20 ರೂಪಾಯಿಯ ಸ್ಟ್ಯಾಂಪ್ ಪೇಪರ್.
ಅರ್ಜಿದಾರನ ಹೆಸರು, ಎರಡನೆಯ ಪಾರ್ಟಿಯ ಹೆಸರು ಮತ್ತು ತೋಟಗಾರಿಕೆ ಕಚೇರಿಯ ಹೆಸರಿನೊಂದಿಗೆ ಸಹಿಯಾದ ಹೇಳಿಕೆ.
ಪಡಿತರ ಚೀಟಿ, ಆಧಾರ್ ಕಾರ್ಡ್, ಮತ್ತು ನೀರು ಬಳಕೆ ಪತ್ರ.
ಪೂರ್ಣತಃ ತುಂಬಿದ ಅರ್ಜಿ ನಮೂನೆ.
ಬ್ಯಾಂಕ್ ಪಾಸ್ ಬುಕ್.
ನೋಟರಿ ಅಫಿಡವಿಟ್.
ತೋಟಗಾರಿಕೆ ಇಲಾಖೆಯ ಕಚೇರಿಗೆ ಈ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಬಳಿಕ, ತೋಟಗಾರಿಕೆ ಇಲಾಖೆ ಪ್ರತಿನಿಧಿ ಪರಿಶೀಲನೆ ಮಾಡಿ ಶೆಡ್ ನಿರ್ಮಾಣಕ್ಕೆ ಅನುಮತಿ ನೀಡುತ್ತಾರೆ. ಶೇ. 40% ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ, ಮತ್ತು ಶೇ. 60% ಮಟಿರಿಯಲ್ ಅಂಗಡಿಗೆ ಕೊಡಲಾಗುತ್ತದೆ.
ಬೀದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್, ಈ ಯೋಜನೆಗೆ ಅರ್ಜಿ ಸಲ್ಲಿಸಿ 10,000 ರೂ. ಹಣ ಪಡೆಯಿರಿ.
60 ಸಾವಿರ ರಿಂದ 1,60,000 ರೂಪಾಯಿಯವರೆಗೆ ಸಹಾಯಧನವನ್ನು ರೈತರು ಪಡೆದುಕೊಳ್ಳಬಹುದು. ಶೆಡ್ ನಿರ್ಮಾಣದ ವ್ಯಯ ಮತ್ತು ಕಾಮಗಾರಿಯು ಹೊಲದ ವಿಸ್ತೀರ್ಣದ ಪ್ರಕಾರ ನಿರ್ಧರಿಸಲಾಗುತ್ತದೆ.
ಈ ಯೋಜನೆ ಮೂಲಕ ರೈತರು ಶೆಡ್ ನಿರ್ಮಿಸಿ, ತಮ್ಮ ಈರುಳ್ಳಿಯನ್ನು ಹೆಚ್ಚು ಕಾಲ ಶೇಖರಣೆ ಮಾಡಿ, ಮಾರಾಟ ಮಾಡಿ ಉತ್ತಮ ಆದಾಯ ಪಡೆಯಬಹುದು.
ಇದರಿಂದ ರೈತರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಸರ್ಕಾರ ಕೈಗೊಡಿದೆ.
ಇತರೆ ವಿಷಯಗಳು :
ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ, ಡಿಫೈನ್ಸ್ ಪಿಂಚಣಿಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.
ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ! ಅಪಘಾತದಲ್ಲಿ ಗಾಯಗೊಂಡವರಿಗೆ 1.5 ಲಕ್ಷ