ನಮಸ್ಕಾರ ಕರ್ನಾಟಕ, ಪಿಎಂ ಕಿಸಾನ್ ಯೋಜನೆಯ ಹೊಸ ಫಲಾನುಭವಿಗಳ ಪಟ್ಟಿಯನ್ನು ಈಗ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಮಾತ್ರ ಮುಂದಿನ 18ನೇ ಕಂತಿನ ಹಣ ಜಮೆಯಾಗಲಿದೆ.
ಯಾವ ರೈತರಿಗೆ ಹಣ ಜಮೆಯಾಗಲಿದೆ: ಪಿಎಂ ಕಿಸಾನ್ ಯೋಜನೆಯ 17 ಕಂತುಗಳು ರೈತರ ಖಾತೆಗೆ ಈಗಾಗಲೇ ಜಮೆಯಾಗಿವೆ. 18ನೇ ಕಂತಿನ ಹಣ ಸೆಪ್ಟೆಂಬರ್ ತಿಂಗಳಲ್ಲಿ ಜಮೆಯಾಗಲಿದ್ದು, ಈ ಹೊಸ ಪಟ್ಟಿಯಲ್ಲಿ ಇರುವ ರೈತರಿಗೆ ಮಾತ್ರ ಈ ಹಣ ಲಭ್ಯವಿರುತ್ತದೆ.
ನಿಮ್ಮ ಹೆಸರನ್ನು ಪಟ್ಟಿನಲ್ಲಿ ಹೇಗೆ ಪರಿಶೀಲಿಸಬೇಕು?
ನಿಮ್ಮ ಹೆಸರು ಹೊಸ ಪಟ್ಟಿಯಲ್ಲಿ ಇರುವುದನ್ನು ಚೆಕ್ ಮಾಡಲು ನೀವು ಮೊಬೈಲ್‌ನಿಂದಲೇ ಮಾಡಬಹುದು.
ಪಿಎಂ ಕಿಸಾನ್ ಯೋಜನೆಯ ವೆಬ್‌ಸೈಟ್ ಅನ್ನು ತೆರೆಯಿರಿ.
ಕರ್ನಾಟಕ ರಾಜ್ಯ ಆಯ್ಕೆಮಾಡಿ.
ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಊರು ಆಯ್ಕೆಮಾಡಿ.
ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ.
ನಿಮಗೆ ಹೊಸ ಪೇಜ್ ಓಪನ್ ಆಗುತ್ತದೆ, ಅಲ್ಲಿ ನಿಮ್ಮ ಹೆಸರು ಪರಿಶೀಲಿಸಬಹುದು.

ಅರ್ಹತೆಗಳೇನು?
ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು.
ಪತಿ, ಪತ್ನಿ ಅಥವಾ ಮಕ್ಕಳಲ್ಲಿ ಯಾರೂ ಸರ್ಕಾರಿ ನೌಕರರಲ್ಲಿರಬಾರದು.
ನಿಮ್ಮ ಕುಟುಂಬದಲ್ಲಿ ಪಿಂಚಣಿ ಪಡೆಯುವವರು ಇರಬಾರದು.
ದಾಖಲೆಗಳಲ್ಲಿರುವ ಹೆಸರು ಸಮಾನವಾಗಿರಬೇಕು
ಜಮೀನು ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್‌ನಲ್ಲಿ ಹೆಸರು ಒಂದೇ ರೀತಿಯಾಗಿರಬೇಕು.
ಹೆಸರು ಸ್ವಲ್ಪ ವ್ಯತ್ಯಾಸವಿದ್ದರೂ, ಅರ್ಹತೆಯಿದ್ದರೂ 18ನೇ ಕಂತು ಜಮೆಯಾಗುವುದಿಲ್ಲ.
ಇಕೆವೈಸಿ (eKYC) ಕಡ್ಡಾಯವಾಗಿದೆ
18ನೇ ಕಂತು ಪಡೆಯಲು ಇಕೆವೈಸಿ ಮಾಡಿಸಿರಬೇಕು.
ನಿಮ್ಮ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್‌ನಿಂದ ಪರಿಶೀಲಿಸಬಹುದು.