ಹಲೋ ಸ್ನೇಹಿತರೆ, ರೈತರಿಗೆ ಆರ್ಥಿಕ ಸಹಾಯ ನೀಡಲು ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ನಡೆಸುತ್ತಿದೆ. ಈ ಯೋಜನೆಯಲ್ಲಿ ಪ್ರತಿ ವರ್ಷ ರೈತರ ಖಾತೆಗೆ 6,000 ರೂಪಾಯಿ ಜಮಾ ಮಾಡಲಾಗುತ್ತಿದೆ. ಈ ಹಣವನ್ನ ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ಕಳುಹಿಸಲಾಗುತ್ತದೆ. ಈಗಾಗಲೇ 17 ಕಂತಿನ ಹಣವನ್ನು ನೀಡಲಾಗಿದ್ದು. ಈಗ 18 ಕಂತಿನ ಹಣ ಪಡೆಯಲು ರೈತರು ಈ ಕೆಲಸ ಮಾಡಲು ಸರ್ಕಾರ ಸೂಚನೆ ನೀಡಿದೆ.
ಪ್ರತಿ ಕಂತಿನಲ್ಲೂ ಸರಕಾರ ರೈತರಿಗೆ 2 ಸಾವಿರ ರೂಪಾಯಿ ನೀಡಲಾಗುತ್ತದೆ. ಈ ಯೋಜನೆಯಡಿ ಇದುವರೆಗೆ 17 ಕಂತುಗಳನ್ನ ಬಿಡುಗಡೆ ಮಾಡಲಾಗಿದೆ. ರೈತ ಭಾಂದವರು ಭವಿಷ್ಯದಲ್ಲಿ ಈ ಯೋಜನೆಯ ಲಾಭವನ್ನ ಪಡೆಯಲು ಬಯಸಿದ್ರೆ, ಅವರು ಕೆಲವು ಪ್ರಮುಖ ಕೆಲಸವನ್ನು ಮಾಡಬೇಕಾಗಿದೆ.
ದೇಶದ ಕೋಟ್ಯಂತರ ರೈತ ಸಹೋದರರು ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇದೀಗ 18ನೇ ಕಂತಿಗೆ ರೈತರು ಕಾಯುತ್ತಿದ್ದಾರೆ. ಮುಂದಿನ ಕಂತು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅಷ್ಟರೊಳಗೆ ರೈತರು ಪ್ರಮುಖ ಕಾರ್ಯಗಳನ್ನ ಪೂರ್ಣಗೊಳಿಸಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್’ನ್ನ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ನೀವು ಈ ಕೆಲಸವನ್ನ ಮಾಡದಿದ್ದರೆ, ನಿಮ್ಮ ಮುಂದಿನ ಕಂತು ಬರುವುದಿಲ್ಲ. ಹಾಗೆಯೇ ಇನ್ನೂ ಇ-ಕೆವೈಸಿ ಮಾಡದಿದ್ದರೆ ತಕ್ಷಣ ಮಾಡಿ.
ಇದನ್ನು ಓದಿ: ರಾಜ್ಯದ ನಾರಿಯರಿಗೆ ಸಿಹಿ ಸುದ್ದಿ ; ಇದೇ ದಿನ ಬಿಡುಗಡೆಯಾಗಲಿದೆ ಗ್ಯಾರಂಟಿ ಅನುದಾನ
ಈ ವಿವರಗಳನ್ನು ಅರ್ಜಿಯಲ್ಲಿ ಸರಿಯಾಗಿ ಭರ್ತಿ ಮಾಡಿ.!
ಕಿಸಾನ್ ಯೋಜನೆಯ ಪ್ರಯೋಜನಗಳನ್ನ ಪಡೆಯಲು ರೈತರು ಅರ್ಜಿ ಸಲ್ಲಿಸುವಾಗ ನಮೂದಿಸಿದ ವಿವರಗಳನ್ನ ಪರಿಶೀಲಿಸಬೇಕು. ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು, ಲಿಂಗ, ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಮುಂತಾದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ನೀವು ಅದನ್ನ ತಪ್ಪಾಗಿ ಭರ್ತಿ ಮಾಡಿದರೆ, ನೀವು ಯೋಜನೆಯ ಪ್ರಯೋಜನಗಳಿಂದ ಹೊರಗುಳಿಯಬಹುದು.
ಇತರೆ ವಿಷಯಗಳು:
ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ, ಪಿಎಂ ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ.
ರಾಜ್ಯದ ರೈತರಿಗೆ ಸಿಹಿ ಸುದ್ದಿ, ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.