ಹಲೋ ಸ್ನೇಹಿತರೆ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 ಕ್ಕೆ ಅನುಮೋದನೆ ನೀಡಿತು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮೂಲಕ 5 ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಕೈಗೆಟುಕುವ ದರದಲ್ಲಿ ಮನೆಯನ್ನು ನಿರ್ಮಿಸಲು, ಖರೀದಿಸಲು ಆರ್ಥಿಕ ಸಹಾಯ ನೀಡಲಾಗುತ್ತದೆ. ಈ ಮಾಹಿತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಈ ಕೇಂದ್ರ ಸರ್ಕಾರದ ಯೋಜನೆಯಡಿ 2.30 ಲಕ್ಷ ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯೋಜನೆಯ ಅಡಿಯಲ್ಲಿ, ಮನೆ ಇಲ್ಲದಿರುವ ಆರ್ಥಿಕವಾಗಿ ದುರ್ಬಲ ವಿಭಾಗದ ಕುಟುಂಬಗಳು (EWS), ಕಡಿಮೆ ಆದಾಯದ ಗುಂಪು (LIG) ಅಥವಾ ಮಧ್ಯಮ ಆದಾಯ ಗುಂಪು (MIG) ವಿಭಾಗಗಳಿಗೆ ಸೇರಿದ ಕುಟುಂಬಗಳು ಮನೆ ಖರೀದಿಸಲು ಅಥವಾ ಹೊಸದಾಗಿ ನಿರ್ಮಿಸಿಕೊಳ್ಳಲು ಅರ್ಹರಾಗಿರುತ್ತಾರೆ.
ಇದನ್ನು ಓದಿ: ಪೋಸ್ಟ್ ಆಫೀಸ್ ನ ಈ ಯೋಜನೆ ಲಾಭ ಪಡೆಯಲು ಸಾಲು ನಿಂತ ಜನ? ಯಾವುದು ಆ ಯೋಜನೆ ಗೊತ್ತಾ?
ನಗರ ಪ್ರದೇಶಗಳಲ್ಲಿನ ಎಲ್ಲಾ ಅರ್ಹ ಫಲಾನುಭವಿಗಳಿಗೆ ಎಲ್ಲಾ ಹವಾಮಾನದಲ್ಲಿಯೂ ವಾಸಿಸಲು ಯೋಗ್ಯವಾದ ಮನೆಗಳನ್ನು ನೀಡಲು ಸರ್ಕಾರವು ಜಾರಿಗೊಳಿಸುತ್ತಿರುವ ಪ್ರಮುಖ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ. ಈ
ಯೋಜನೆಯಡಿ 1.18 ಕೋಟಿ ಮನೆಗಳು ಮಂಜೂರಾಗಿದ್ದು, ಈಗಾಗಲೇ 85.5 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಇಡಬ್ಲ್ಯುಎಸ್ ಕುಟುಂಬಗಳು ವಾರ್ಷಿಕ 3 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ಕುಟುಂಬಗಳಾಗಿವೆ. LIG ಕುಟುಂಬಗಳು 3 ಲಕ್ಷದಿಂದ 6 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳಾಗಿವೆ. MIG ಕುಟುಂಬಗಳು ವಾರ್ಷಿಕ 6 ಲಕ್ಷದಿಂದ 9 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ಕುಟುಂಬಗಳಾಗಿವೆ.
2011 ರ ಜನಗಣತಿಯ ಪ್ರಕಾರ ಎಲ್ಲಾ ಶಾಸನಬದ್ಧ ಪಟ್ಟಣಗಳು ಮತ್ತು ಅಧಿಸೂಚಿತ ಯೋಜನಾ ಪ್ರದೇಶಗಳು, ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ/ವಿಶೇಷ ಪ್ರದೇಶಾಭಿವೃದ್ಧಿ ಪ್ರಾಧಿಕಾರ/ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ರಾಜ್ಯ ಶಾಸನದ ಅಡಿಯಲ್ಲಿ ಬರುವ ಅಧಿಸೂಚಿತ ಯೋಜನೆ/ಅಭಿವೃದ್ಧಿ ಪ್ರದೇಶದ ವ್ಯಾಪ್ತಿಯೊಳಗೆ ಬರುವ ಪ್ರದೇಶಗಳು ಸೇರಿದಂತೆ ಇದಾದ ನಂತರ ಅಧಿಸೂಚಿಸಲಾದ ಪಟ್ಟಣಗಳನ್ನು PMAY-ನಗರ 2.0 ಅಡಿಯಲ್ಲಿ ಸೇರಿಸಲಾಗಿದೆ.
ಇತರೆ ವಿಷಯಗಳು:
PF ಖಾತೆ ಹೊಂದಿರುವವರಿಗೆ ದೊಡ್ಡ ಎಚ್ಚರಿಕೆ, ಇಂದಿನಿಂದಲೇ ಈ ಹೊಸ ನಿಯಮ ಜಾರಿ.
ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ, ಈ ವರ್ಗದ ಮಹಿಳೆಯರಿಗೆ ಸಿಗಲ್ಲಿದೆ ಸಾಲದ ಸೌಲಭ್ಯ, ಇಂದೇ ಅರ್ಜಿ ಸಲ್ಲಿಸಿ.