ಹಲೋ ಸ್ನೇಹಿತರೆ, 2024-25ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಘಟಕಗಳಿಂದ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ರೈತರು ಅರ್ಜಿಯನ್ನು ಸಲ್ಲಿಸಲು ನಮೂನೆಯನ್ನು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಅರ್ಜಿ ಸಲ್ಲಿಸಬಹುದು. ಯೋಜನೆಯ ಲಾಭ ಪಡೆಯಲು ಇರಬೇಕಾದ ಅರ್ಹತೆ, ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ರೈತರು ಕನಿಷ್ಟ 1 ಎಕರೆ ಜಮೀನನ್ನು ಹೊಂದಿರಬೇಕು. ಈ ಯೋಜನೆಯನ್ನು ರೈತರ ಅವಶ್ಯಕತೆಗನುಗುಣವಾಗಿ ಅಚ್ಚು ಕಟ್ಟು ಪ್ರದೇಶವನ್ನು ಒಳಗೊಂಡಂತೆ ಅನುಷ್ಠಾನಗೊಳಿಸಲಾಗುವುದು. ಜಮೀನಿನಲ್ಲಿ ಬದು ನಿರ್ಮಾಣಕ್ಕೆ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ವಂಗಡ ವರ್ಗ 90%), ಕೃಷಿ ಹೊಂಡ ನಿರ್ಮಾಣ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗ 90%), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ (ಸಾಮಾನ್ಯ ವರ್ಗ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗ 90%),
ಇದನ್ನು ಓದಿ: ಮೈಕ್ರೋ ಕ್ರೆಡಿಟ್: 2.5 ಲಕ್ಷಕ್ಕೆ ಸಿಗಲಿದೆ 1.5 ಲಕ್ಷ ಸಹಾಯಧನ!
ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣಕ್ಕೆ (ಸಾಮಾನ್ಯ ವರ್ಗ 40% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ವಂಗಡ ವರ್ಗ 50%), ಕೃಷಿ ಹೊಂಡದಿಂದ ನೀರು ಎತ್ತಲು ಡಿಸೇಲ್ / ಪೇಟ್ರೋಲ್ ಪಂಪ್‌ಸೆಟ್ ಅಳವಡಿಕೆ (ಸಾಮಾನ್ಯ ವರ್ಗಕ್ಕೆ 80% ಸಹಾಯಧನ & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗ 90%),ನೀರನ್ನು ಬೆಳಗಳಿಗೆ ಹಾಯಿಸಲು ಸೂಕ್ಷ್ಮ (ತುಂತುರು / ಹನಿ) ನೀರಾವರಿ (ಎಲ್ಲಾ ವರ್ಗದ ರೈತರಿಗೆ 90%) ಸೌಲಭ್ಯಗಳನ್ನು ನಿಯಮಾನುಸಾರ ನೀಡಲಾಗುವುದು.
ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ದ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಪ್ರತಿಯೊಬ್ಬ ಫಲಾನುಭವಿಗೆ ಮೇಲೆ ತಿಳಿಸಿದ ಎಲ್ಲಾ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಲು ಸಹಾಯಧನ ನೀಡಲಾಗುವುದು.
ಇತರೆ ವಿಷಯಗಳು:
ಹಿರಿಯ ನಾಗರಿಕರಿಗೆ ಫ್ರೀ ಆಫರ್.! ಕೇಂದ್ರದಿಂದ ಬಂತು ನ್ಯೂ ಸ್ಕೀಮ್
ಕಾರು ಚಾಲಕರಿಗೆ ಟೋಲ್ ತೆರಿಗೆಯಿಂದ ಮುಕ್ತಿ! ಸಾರಿಗೆ ಸಚಿವರ ಪ್ರಕಟಣೆ