ಬೆಂಗಳೂರು: BPL ಕಾರ್ಡ್ ಹೊಂದಿದಂತಹ ಅನರ್ಹರನ್ನು ಗುರುತಿಸುವ ಕಾರ್ಯಕ್ಕೆ ಆಹಾರ ಇಲಾಖೆಯು ಚುರುಕು ನೀಡಿದೆ.
ತೆರಿಗೆ ಪಾವತಿದಾರರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರಾಗಿರುವ ಕುಟುಂಬದವರು, ಮನೆಯನ್ನು ಬಾಡಿಗೆ ನೀಡಿದವರು, 7.5 ಎಕರೆಗಿಂತ ಹೆಚ್ಚಿನ ಜಮೀನನ್ನು ಹೊಂದಿದವರು, ಸ್ವಂತಕ್ಕೆ 4 ಚಕ್ರದ ವಾಹನಗಳನ್ನು ಹೊಂದಿದವರು BPL, ಅಂತ್ಯೋದಯ ಕಾರ್ಡ್ ಅನ್ನು ಪಡೆದುಕೊಳ್ಳುವಂತಿಲ್ಲ.
ಸುಳ್ಳು ದಾಖಲೆಗಳನ್ನು ನೀಡಿ BPL ಕಾರ್ಡ್ ಅನ್ನು ಪಡೆದುಕೊಂಡಿರುವುದು ಸಾಬೀತಾದಲ್ಲಿ ಇದುವರೆಗೂ ನ್ಯಾಯಬೆಲೆಯ ಅಂಗಡಿಯಲ್ಲಿ ಪಡೆದ ರೇಷನ್ ಮತ್ತು ಇತರೆ ಧಾನ್ಯಗಳ ಮೊತ್ತವನ್ನು ಅಕ್ಕಿ KG ಗೆ ತಲಾ 35 ರೂಪಾಯಿಯಂತೆ ಮರಳಿಸಬೇಕು. ಜೊತೆಗೆ ಕ್ರಿಮಿನಲ್ ಕೇಸ್ ಅನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಸಹ ಓದಿ: ಹೊಸ ವಾಹನ ಖರೀದಿಸುವ ಪ್ಲಾನ್ ಇದ್ಯಾ?, ರಾಜ್ಯ ಸರ್ಕಾರದಿಂದ ಸಿಗಲ್ಲಿದೆ ದೊಡ್ಡ ಮೊತ್ತದ ಸಹಾಯಧನ.
ರಾಷ್ಟ್ರೀಯ ಆಹಾರ ಭದ್ರತೆಯ ಕಾಯ್ದೆಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ. 76.04, ನಗರ ಪ್ರದೇಶದಲ್ಲಿ ಶೇ. 49.36 ಸೇರಿ 3,58,87,666 ಫಲಾನುಭವಿಗಳಿಗೆ 1,03,70,666 BPL ಕಾರ್ಡ್ ನೀಡಬೇಕು ಎನ್ನುವ ನಿಯಮ ಇದೆ. ಆದರೆ, ರಾಜ್ಯದಲ್ಲಿ 3,93,29,981 ಫಲಾನುಭವಿಗಳಿಗೆ 1,16,51,209 BPL ಕಾರ್ಡ್ ನೀಡಲಾಗಿದೆ. ನಿಗದಿಗಿಂತ 14 ಲಕ್ಷ BPL ಕಾರ್ಡ್ ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಸುಳ್ಳು ದಾಖಲೆಗಳನ್ನು ನೀಡಿ ಪಡೆದುಕೊಂಡ BPL, ಅಂತ್ಯೋದಯ ಕಾರ್ಡ್ಗಳನ್ನು ಹಿಂತಿರುಗಿಸುವಂತೆ ಆಹಾರ ಇಲಾಖೆಯು ಹಲವು ಬಾರಿ ಅವಕಾಶವನ್ನು ನೀಡಿದೆ. ಇದೀಗ ಪರಿಶೀಲನಾ ಕಾರ್ಯಕ್ಕೆ ಮತ್ತಷ್ಟು ಚುರುಕು ನೀಡಲಾಗಿದೆ. ಸುಳ್ಳು ದಾಖಲೆಯನ್ನು ನೀಡಿ BPL ಕಾರ್ಡ್ ಅನ್ನು ಪಡೆದವರು ತಮ್ಮ ಹತ್ತಿರದ ತಾಲೂಕು ಕಚೇರಿಗೆ ಬೇಟಿ ನೀಡಿ ಸ್ವಯಂ ಪ್ರೇರಿತವಾಗಿ ವಾಪಸ್ ನೀಡಬೇಕು. ಆಹಾರ ಇಲಾಖೆಯೇ ಪತ್ತೆ ಮಾಡಿದಲ್ಲಿ ಇದುವರೆಗೂ ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಅಕ್ಕಿ ಅಥವಾ ಇತರೆ ಧಾನ್ಯಗಳ ಹಣವನ್ನು ವಸೂಲಿ ಮಾಡಲಾಗುವುದು. ಕ್ರಿಮಿನಲ್ ಪ್ರಕರಣದ ದಾಖಲಿಸಲಾಗುವುದು ಎನ್ನಲಾಗಿದೆ.
ಇತರೆ ವಿಷಯಗಳು:
ಬಿಪಿಎಲ್ ಕಾರ್ಡ್ ರದ್ದು, ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ.
ಬೆಂಗಳೂರು ಸೇರಿ ಮಲೆನಾಡಿನಲ್ಲಿ ಮತ್ತೆ ಹೆಚ್ಚಲಿದೆ ಮಳೆ, ಆರೆಂಜ್ ಅಲರ್ಟ್ ಘೋಷಣೆ.