ಹಲೋ ಸ್ನೇಹಿತರೆ, ನಕಲಿ ಕಾರ್ಡ್ ಪತ್ತೆಗೆ, ಪಡಿತರ ವಂಚನೆ ತಡೆಗೆ ಮುಂದಾದ ಆಹಾರ ಇಲಾಖೆ, ರೇಷನ್ ಕಾರ್ಡ್ಗೆ ಆಧಾರ್ ದೃಢೀಕರಣ ಜೋಡಣೆ ಪ್ರಕ್ರಿಯೆ ಮರು ಜಾರಿಗೊಳಿಸಿದೆ. 2019ರ ಜು.19ರಂದು ಪಡಿತರ ಕಾರ್ಡ್ನ ಎಲ್ಲಾ ಸದಸ್ಯರು ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶೇ.75ರಷ್ಟು ಕಾರ್ಡ್ದಾರರು ಇಕೆವೈಸಿ ಮಾಡಿಸಿಕೊಂಡಿದ್ದರು. ಇನ್ನೂ ಕೆಲವು ಕಾರ್ಡ ಬಾಕಿ ಇರುವುದರಿಂದ ಈ ಆದೇಶ ಹೊರಡಿಸಿದೆ.
ಇದೀಗ ಪಡಿತರ ಚೀಟಿ ಹೊಂದಿರುವ ಪ್ರತೀ ಕುಟುಂಬಗಳು ಕಡ್ಡಾಯವಾಗಿ ಇಕೆವೈಸಿ ಮಾಡಿಸಬೇಕೆಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ಹಾಗಾಗಿ, ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರು ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಕಾರ್ಡ್ ರದ್ದು ಮಾಡಲಾಗುವುದು ಎನ್ನಲಾಗಿದೆ.
ಇಕೆವೈಸಿ ಏಕೆ ಮಾಡಬೇಕು?
ಹಿಂದೆ ಒಂದು ಬಾರಿ ಇಲಾಖೆಯಿಂದ ನಕಲಿ ಕಾರ್ಡ್ ತಡೆಯಲು ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು. ನಂತರ, ರೇಷನ್ ಕಾರ್ಡ್ಗೆ ಆಧಾರ್ ಜೋಡಣೆ ನಿಯಮ ತರಲಾಯಿತು. ಶೇ.100 ಆಧಾರ್ ಜೋಡಣೆಯಾಗಿತ್ತು. ಈ ವೇಳೆ ಲಕ್ಷಾಂತರ ನಕಲಿ ಕಾರ್ಡ್ ಪತ್ತೆಯಾಗಿತ್ತು. 2019ರಿಂದ 2022ರವರೆಗೆ ನಡೆದ ಇ-ಕೆವೈಸಿ ಪ್ರಕ್ರಿಯೆಯಲ್ಲೂ ಸತ್ತವರ ಹೆಸರಿನಲ್ಲಿ ರೇಷನ್ ಪಡೆಯುತ್ತಿರುವುದು ಬಹಿರಂಗವಾಗಿತ್ತು. ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ ಹಾಗೂ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಪಡಿತರ ಕಾರ್ಡ್ನ ಪ್ರತಿಯೊಬ್ಬರು ಇಕೆವೈಸಿ ಮಾಡಿಸಿಕೊಳ್ಳಬೇಕೆಂಬ ನಿಯಮವಿದೆ. ಆದ್ದರಿಂದ, ಎಲ್ಲ ಕಾರ್ಡ್ದಾರರು ಇ-ಕೆವೈಸಿ ಮಾಡಿಸಿಕೊಂಡರೆ ನಕಲಿ ಕಾರ್ಡ್ಗೆ ಪತ್ತೆಯಾಗುವುದಲ್ಲದೆ ಪಡಿತರ ಸೋರಿಕೆ ತಡೆಗಟ್ಟಬಹುದು. ಜತೆಗೆ, ಕಾರ್ಡ್ನಲ್ಲಿ ಮೃತ ಸದಸ್ಯರ ಹೆಸರನ್ನು ಡಿಲೀಟ್ ಮಾಡುವುದಕ್ಕೆ ಅನುಕೂಲವಾಗಲಿದೆ.
ಮುರ್ನಾಲ್ಕು ವರ್ಷದ ಹಿಂದೆ ಇಕೆವೈಸಿ ಮಾಡಿದ್ದಕ್ಕಾಗಿ ನೀಡಬೇಕಿದ್ದ ಹಣವನ್ನು ಆಹಾರ ಇಲಾಖೆ ಬಾಕಿ ಉಳಿಸಿಕೊಂಡಿದೆ. ಹಲವು ಬಾರಿ ಮನವಿ ಪತ್ರ ನೀಡಿದ್ದರೂ ಈವರೆಗೆ ಇಕೆವೈಸಿ ಹಣ ಬಿಡುಗಡೆ ಮಾಡಿಲ್ಲ. ಇದೀಗ ರೇಷನ್ ಕಾರ್ಡ್ಗೆ ಆಧಾರ್ ದೃಢೀಕರಣ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದಕ್ಕೆ ನಮ್ಮ ವಿರೋಧವಿದೆ. ಸಂಪೂರ್ಣವಾಗಿ ಬಾಕಿ ಹಣ ಬಿಡುಗಡೆ ಮಾಡಬೇಕು ಮತ್ತು ಸರ್ವರ್ ಸಮಸ್ಯೆ ಬಗೆಹರಿಸಿದರೆ ಮಾತ್ರವೇ ಇಕೆವೈಸಿ ಮಾಡಲಾಗುವುದು.
ಪ್ರಕ್ರಿಯೆ ಹೇಗೆ?
ರೇಷನ್ ಕಾರ್ಡ್ನಲ್ಲಿರುವ ಪ್ರತಿಯೊಬ್ಬರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಆಧಾರ್ ದೃಢೀಕರಣ ಮಾಡಿಸಬೇಕು. ಸರ್ಕಾರವು ಪ್ರತಿ ಫಲಾನುಭವಿ ದೃಢೀಕರಣಕ್ಕೆ 5 ರೂ ಮತ್ತು ಒಂದು ಕುಟುಂಬದಲ್ಲಿ ಎಷ್ಟೇ ಫಲಾನುಭವಿ ಇದ್ದರೂ ನೋಂದಾಣಿಗೆ ಗರಿಷ್ಟ 20 ರೂ.ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸ ಬೇಕಿದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಇಕೆವೈಸಿ ಮಾಡಿಸತಕ್ಕದು. ಕಾರ್ಡ್ ಸಂಖ್ಯೆ ನಮೂದಿಸಿದರೆ ಎಷ್ಟು ಸದಸ್ಯರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ದೊರೆಯುತ್ತದೆ. ಬಳಿಕ, ಎಲ್ಲರೂ ಆಧಾರ್ ಲಿಂಕ್ ಮಾಡಿಸಬೇಕು. ಫಲಾನುಭವಿ ಮೃತಪಟ್ಟಿದ್ದರೆ ಅಥವಾ ಬೇರೆ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ ದೃಢೀಕರಣ ವೇಳೆ ಲೆಕ್ಕ ಸಿಗಲಿದೆ.
ಇತರೆ ವಿಷಯಗಳು:
FSSAI ನಿಂದ ತುಪ್ಪ, ಹಾಲು ಮತ್ತು ಡೈರಿ ಉತ್ಪನ್ನಗಳಿಗೆ ಮಹತ್ವದ ಸೂಚನೆ!
ಹೊಸದಾಗಿ ‘ಶಾಲಾ ಸುರಕ್ಷತಾ ಮಾರ್ಗಸೂಚಿ’ ಜಾರಿ! ರಾಜ್ಯದ ಶಿಕ್ಷಣ ಸಚಿವಾಲಯ ಸೂಚನೆ