ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆ ಮಾಡಿಸಲು ಆಗಸ್ಟ್ 31 ಅಂತಿಮ ಗಡುವು ನಿಗದಿಪಡಿಸಿದೆ. ಇ-ಕೆವೈಸಿ ಸಂಗ್ರಹಣೆಯಾಗಿಲ್ಲದ ಪಡಿತರ ಚೀಟಿದಾರರು ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ರೇಷನ್ ಕಾರ್ಡ್ ದಾರರ Ekyc ಸಂಗ್ರಹಣೆಯನ್ನು 2017ರಿಂದ ನ್ಯಾಯಬೆಲೆಯ ಅಂಗಡಿಗಳ ಮುಕಾಂತರ ಸಂಗ್ರಹಣೆಯನ್ನು ಮಾಡಲಾಗುತ್ತಿದೆ. ರೇಷನ್ ಕಾರ್ಡ್ ನಲ್ಲಿ ಸದಸ್ಯರ Ekyc ಸಂಗ್ರಹಣೆಯಾಗದೇ ಇದ್ದಲ್ಲಿ ಮುಂದೆ ಬರುವ ದಿನಗಳಲ್ಲಿ ಅಂತಹ ರೇಷನ್ ಕಾರ್ಡ್ಗಳು, ಸದಸ್ಯರುಗಳ ಹೆಸರುಗಳು ಪಡಿತರ ಚೀಟಿಗಳಿಂದ ಬಿಟ್ಟು ಹೋಗುವ ಮತ್ತು ಆಹಾರಧಾನ್ಯದ ಹಂಚಿಕೆಯು ಸ್ಥಗಿತಗೊಳ್ಳುವಂತಹ ಸಂಭವವಿರುತ್ತದೆ.
ಆದ್ದರಿಂದ ಇ-ಕೆ.ವೈ.ಸಿ ಸಂಗ್ರಹಣೆಯಾಗಿಲ್ಲದ್ದ ಪಡಿತರ ಚೀಟಿದಾರರು, ಸದಸ್ಯರು ಇದೇ ಆಗಸ್ಟ್ 31ರೊಳಗೆ ತಾವು ರಾಜ್ಯದ, ಜಿಲ್ಲೆಯ, ತಾಲ್ಲೂಕಿನ, ಹಳ್ಳಿಯ, ತಾವು ಇರುವ ಸ್ಥಳದಲ್ಲಿಯೇ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಜೀವಮಾಪನ ನೀಡಿ ಇ-ಕೆ.ವೈ.ಸಿ ಸಂಗ್ರಹಿಸಿಕೊಳ್ಳಲು ಪಡಿತರ ಚೀಟಿದಾರರಿಗೆ ಅಂತಿಮ ಗಡುವು ನೀಡಿದ್ದು, ತಪ್ಪದೇ ಇ.ಕೆ.ವೈ.ಸಿ ಮಾಡಿಸಬೇಕಿದೆ.
ಚಿತ್ರದುರ್ಗ ಜಿಲ್ಲೆಯ ಇ-ಕೆ.ವೈ.ಸಿ ಸಂಗ್ರಹಣೆಯ ಪ್ರಗತಿಯನ್ನು ಪರಾಮರ್ಶೆ ಮಾಡಲಾಗಿ, ಇದುವರೆಗೂ ಜಿಲ್ಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿ ಸದಸ್ಯರ ಶೇ.96.34 ಮತ್ತು ಆದ್ಯತಾ ಪಡಿತರ ಚೀಟಿ ಸದಸ್ಯರ ಶೇ.97.18 ಸೇರಿದಂತೆ ಒಟ್ಟು ಶೇ.97.07ರಷ್ಟು ಇ-ಕೆ.ವೈ.ಸಿ ಸಂಗ್ರಹಣೆ ಮಾಡಲಾಗಿದೆ ಎಂದು ಚಿತ್ರದುರ್ಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತರೆ ವಿಷಯಗಳು:
ಜನಸಾಮಾನ್ಯರಿಗೆ ಬೆಳ್ಳುಳ್ಳಿ ಶಾಕ್! 400 ರೂ. ದಾಟಿದ ಬೆಳ್ಳುಳ್ಳಿ ದರ
ಪ್ರೀಮಿಯಂ ಮದ್ಯದ ತೆರಿಗೆ ಕಡಿಮೆ…! ಬಿಯರ್ ಬೆಲೆ ಹೆಚ್ಚಳ!