ಹಲೋ ಸ್ನೇಹಿತರೆ, ರೇಷನ್ ಕಾರ್ಡ್ ದಾರರಿಗೆ ಹಣಕಾಸು ಅನುಮೋದನೆಗಾಗಿ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದ್ದು, ಅಕ್ಟೋಬರ್ ನಿಂದಲೇ ಈ ನೂತನ ಯೋಜನೆ ಜಾರಿಗೆ ಬರಲಿದೆ. ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದ್ದು, ಅನ್ನಭಾಗ್ಯದ ಹಣದ ಬದಲಿಗೆ ನೀಡುತ್ತಿದ್ದ 5 ಕೆಜಿ ಅಕ್ಕಿ ಹಣದ ಬದಲು ರೇಷನ್ ಕಿಟ್ ಆಗಿ ನೀಡಲಿದೆ.
ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ, ಅನ್ನಭಾಗ್ಯದ ಹಣದ ಬದಲು ತೊಗರಿಬೇಳೆ, ಸಕ್ಕರೆ, ತಾಳೆ ಎಣ್ಣೆ ಹಾಗೂ ಅಯೋಡೈಸ್ಡ್ ಉಪ್ಪು ನೀಡಲು ನಿರ್ಧರಿಸಿದ್ದು, ಈಗಾಗಲೇ ಅಧಿಕಾರಿಗಳ ಚರ್ಚೆ ನಡೆಸುತ್ತಿದ್ದಾರೆ.
ಇದನ್ನು ಓದಿ: ಹಳೆ ಪಿಂಚಣಿ ಯೋಜನೆ ಜಾರಿ! ಸಮಿತಿ ರಚನೆಗೆ ಸರ್ಕಾರದ ಆದೇಶ
ರಾಜ್ಯ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ಚುನಾವಣೆ ವೇಳೆಯಲ್ಲಿ ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿ ಕೊರತೆಯಿಂದಾಗಿ 5 ಕೆಜಿ ಅಕ್ಕಿ ಕೊಟ್ಟು ಇನ್ನುಳಿದ 5 ಕೆಜಿ ಅಕ್ಕಿಗೆ ನಗದು ಪಾವತಿಸುತ್ತಿತ್ತು. ಇದಕ್ಕೆ ಸರ್ಕಾರ ಪ್ರತಿ ತಿಂಗಳು ಬರೋಬ್ಬರಿ 700 ಕೋಟಿ ರೂ. ಅಧಿಕ ಹಣ ಭರಿಸಬೇಕಾಗುತ್ತದೆ. ಈಗಾಗಲೇ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ರೇಷನ್ ಕಾರ್ಡ್‌ದಾರರಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಿಸಲಾಗುತ್ತಿದೆ. ಇದೀಗ ಅನ್ನಭಾಗ್ಯದ ಹಣದ ಬದಲು ಇತರೆ ದಿನಸಿ ಪದಾರ್ಥಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಇಂದು ಮಧ್ಯಾಹ್ನ 3 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಪಡಿತರ ಚೀಟಿದಾರರಿಗೆ ದಿನಸಿ ಕಿಟ್ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಇತರೆ ವಿಷಯಗಳು:
ರಾಜ್ಯದಲ್ಲಿ `ಕೃಷಿ ಭೂಮಿ’ ಖರೀದಿಸಲು ಹೊಸ ರೂಲ್ಸ್ ಜಾರಿ! ಅರ್ಹತೆ ಏನು?
ಮಹಿಳೆಯರಿಗೆ 3 ಲಕ್ಷ ಪಡೆಯುವ ಸೌಲಭ್ಯ.! ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ