ದೇಶದ ಅತಿದೊಡ್ಡ ಬ್ಯಾಂಕ್ ಆಗಿ ಮುಂದುವರಿದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸತತ ಮೂರನೇ ತಿಂಗಳಿನಿಂದ ಶಾಕ್ ನೀಡಿದೆ. ಎಸ್‌ಬಿಐ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ದರವನ್ನು (ಎಂಸಿಎಲ್‌ಆರ್) ಹೆಚ್ಚಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ರೆಪೊ ದರವನ್ನು ಸ್ಥಿರವಾಗಿ ಇರಿಸಿದೆ. ಆದರೆ, ಎಸ್‌ಬಿಐ ಸಾಲದ ದರವನ್ನು ಹೆಚ್ಚಿಸಿರುವುದು ಗಮನಾರ್ಹ. ಸಾಲದ ಬಡ್ಡಿ ದರಗಳನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಪರಿಷ್ಕರಿಸಲಾಗಿದೆ. ಇಂದಿನಿಂದ ಎಸ್‌ಬಿಐ ಜಾರಿಗೆ ಬರಲಿದೆ.
ಎಂಸಿಎಲ್‌ಆರ್ ಅನ್ನು ಕೊನೆಯ ಬಾರಿಗೆ ಈ ವರ್ಷದ ಜೂನ್‌ನಲ್ಲಿ ಪರಿಷ್ಕರಿಸಲಾಗಿತ್ತು. ಪರಿಷ್ಕೃತ ದರಗಳ ಪ್ರಕಾರ, MCLLR ವಿವಿಧ ಅವಧಿಗಳಿಗೆ 8.20 ಪ್ರತಿಶತದಿಂದ ಗರಿಷ್ಠ 9.1 ಪ್ರತಿಶತದವರೆಗೆ ಇರುತ್ತದೆ. ರಾತ್ರಿಯ ಎಂಸಿಎಲ್‌ಆರ್ ಶೇಕಡಾ 8.20 ತಲುಪಿದರೆ, ಒಂದು ತಿಂಗಳು ಮತ್ತು ಮೂರು ತಿಂಗಳ ಅವಧಿಗೆ ಸಾಲದ ದರವು ಶೇಕಡಾ 8.45 ರಿಂದ ಶೇಕಡಾ 8.5 ಕ್ಕೆ ಏರಿತು.
ಆರು ತಿಂಗಳ ಎಂಸಿಎಲ್‌ಆರ್ ಶೇ 8.85ಕ್ಕೆ ಮತ್ತು ಒಂದು ವರ್ಷದ ಸಾಲದ ದರವು ಶೇ 8.85ರಿಂದ ಶೇ 8.95ಕ್ಕೆ ಏರಿಕೆಯಾಗಿದೆ. ಎಸ್‌ಬಿಐ ಎರಡು ವರ್ಷಗಳ ಎಂಸಿಎಲ್‌ಆರ್ ಅನ್ನು ಶೇಕಡಾ 9.05 ಕ್ಕೆ ಮತ್ತು ಮೂರು ವರ್ಷಗಳ ಎಂಸಿಎಲ್‌ಆರ್ ಅನ್ನು ಶೇಕಡಾ 9.1 ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ.
ಇದನ್ನೂ ಸಹ ಓದಿ: ಆಧಾರ್ ಕಾರ್ಡ್ ಇದ್ದರೆ ಸಾಕು, ಆಧಾರ್ ಕಾರ್ಡ್ ಮೂಲಕ ಸುಲಭವಾಗಿ 1 ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಿ.
ಈಗ ಎಂಸಿಎಲ್ ಆರ್ ಹೆಚ್ಚಳದಿಂದ ಗ್ರಾಹಕರು ಬ್ಯಾಂಕ್ ನಿಂದ ಪಡೆಯುವ ಗೃಹಸಾಲ, ವೈಯಕ್ತಿಕ ಸಾಲ, ವಾಹನ ಸಾಲ ಹೆಚ್ಚು ಹೊರೆಯಾಗಲಿದೆ. ಕೆಲ ಸಮಯದ ಹಿಂದೆ ಎಸ್‌ಬಿಐ ಕೂಡ ಎಂಸಿಎಲ್‌ಆರ್ ದರವನ್ನು ಹೆಚ್ಚಿಸಿತ್ತು. ಮಧ್ಯದಲ್ಲಿ ಎಫ್‌ಡಿ ದರಗಳನ್ನು ಹೆಚ್ಚಿಸಿದ್ದರೆ, ಈಗ ಮತ್ತೆ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಾಗಿದೆ ಎಂದು ಹೇಳಬಹುದು.
MCLR ಎಂದರೆ ಲೆಂಡಿಂಗ್ ದರ. ಎಂಸಿಎಲ್‌ಆರ್‌ಗಿಂತ ಕಡಿಮೆ ದರದಲ್ಲಿ ಸಾಲ ನೀಡಲು ಬ್ಯಾಂಕ್‌ಗಳಿಗೆ ಅವಕಾಶವಿಲ್ಲ. ಇದರಿಂದಾಗಿ ಇಎಂಐಗಳಿಂದ ಕೊಂಚ ರಿಲೀಫ್ ಪಡೆಯಬೇಕೆನ್ನುವ ಗ್ರಾಹಕರಿಗೆ ಮತ್ತೊಮ್ಮೆ ನಿರಾಸೆಯಾಗಿದೆ.
ಇತರೆ ವಿಷಯಗಳು:
ಮುಂದಿನ ತಿಂಗಳಿನಿಂದ ಹೊಸ ‘BPL’ ಕಾರ್ಡ್ ವಿತರಣೆ! ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ
ರಾಜ್ಯದ ರೈತರಿಗೆ ಕೃಷಿ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ!