ಹಲೋ ಸ್ನೇಹಿತರೆ, ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರ ಮಕ್ಕಳ ವಿದ್ಯಾರ್ಹತೆ ನೀಡಿ, ಉದ್ಯಮಗಳಿಗೆ ಅಗತ್ಯವಾದ ಉನ್ನತೀಕರಿಸಿದ ಕೌಶಲ ತರಬೇತಿ ಒದಗಿಸುವುದರ ಮೂಲಕ ಉದ್ಯೋಗಾವಶಕಾಶ ಕಲ್ಪಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕ್ರಮ ಕೈಗೊಂಡಿದ್ದಾರೆ. ವಿಕಾಸ ಸೌಧದಲ್ಲಿ ಉನ್ನತೀಕರಿಸಿದ ಕೌಶಲ ತರಬೇತಿ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಸಭೆ ಸೋಮವಾರ ನಡೆದಿದ್ದು, ಕೇಂದ್ರಗಳ ಪರಿಕಲ್ಪನೆ, ಪೂರ್ವ ತಯಾರಿ ಬಗ್ಗೆ ಸಚಿವರು ಸಮಾಲೋಚನೆ ನಡೆಸಿದ್ದಾರೆ.

ಖಾಸಗಿ ಕಂಪನಿಗಳು, ಉದ್ಯಮಿಗಳು, ಕಾರ್ಖಾನೆಗಳ ಸಹಭಾಗಿತ್ವದಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕೇಂದ್ರಕ್ಕೆ ಅಗತ್ಯವಾದ ಸ್ಥಳ ಸೇರಿ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಮಾಡಿ ಕೊಡಲಿದೆ. ಅಗತ್ಯವಿರುವ ಕೋರ್ಸ್ ಮತ್ತು ಪಠ್ಯಕ್ರಮಗಳನ್ನು ಸಿದ್ಧಪಡಿಸಿ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವ ಜವಾಬ್ದಾರಿಯನ್ನು ಖಾಸಗಿ ಕಂಪನಿ, ಉದ್ಯಮ ಮತ್ತು ಕಾರ್ಖಾನೆಗಳು ಹೊಂದಿರುತ್ತವೆ.
ಇದನ್ನು ಓದಿ: ವಾಹನ ಚಾಲಕರಿಗೆ ಬಿಗ್ ಶಾಕ್! ದೋಷಯುಕ್ತ ನಂಬರ್ ಪ್ಲೇಟ್ ಕಂಡುಬಂದಲ್ಲಿ ಕಠಿಣ ಕ್ರಮ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ಈಗಾಗಲೇ 50 ಲಕ್ಷ ಕಾರ್ಮಿಕರ ಹೆಸರು ನೋಂದಣಿಯಾಗಿದ್ದು, ಮೊದಲ ಹಂತದಲ್ಲಿ ಈ ಕಾರ್ಮಿಕರ ಮಕ್ಕಳಿಗೆ, ನಂತರ ಅಸಂಘಟಿತ ವಲಯದ 50 ಲಕ್ಷ ಕಾರ್ಮಿಕರ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಕಂದಾಯ ವಿಭಾಗವಾರು ಉನ್ನತೀಕರಿಸಿದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಇಲಾಖೆ ಉದ್ದೇಶಿಸಲಾಗಿದೆ. ಪ್ರಾಯೋಗಿಕವಾಗಿ ಹುಬ್ಬಳ್ಳಿ -ಧಾರವಾಡದಲ್ಲಿ ಕೌಶಲ ತರಬೇತಿ ಕೇಂದ್ರ ತೆರೆಯಲಾಗುವುದು ಎನ್ನಲಾಗಿದೆ.
ಇತರೆ ವಿಷಯಗಳು:
ಇಂದಿನಿಂದ ಟಿಕೆಟ್ ಖರೀದಿಗೆ QR ಕೋಡ್ ಸ್ಕ್ಯಾನ್ ಮಾಡಿ! ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಯಾತ್ರಿಕರಿಗೆ ಹೊಸ ನಿಯಮ! ನೋಂದಣಿ ಶುಲ್ಕ ರದ್ದು, ಅನುಕೂಲಕರ ಶುಲ್ಕ ಡಬಲ್