ಹಲೋ ಸ್ನೇಹಿತರೇ, ಕೃಷಿ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಸಹಾಯಧನ ಯೋಜನೆಯಡಿ ಮಿನಿ ಟ್ರ್ಯಾಕ್ಟರ್, ಟಿಲ್ಲರ್, ಪವರ್ ವೀಡರ್ ಸೇರಿದಂತೆ ಇತರೆ ಯಂತ್ರೋಪಕರಣಗಳನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣ ಯೋಜನೆ ಅಡಿ ಸಾಮಾನ್ಯ ವರ್ಗದ ರೈತರಿಗೆ ಶೇಕಡವಾರು 50 ರವರೆಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.90 ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ಸೂಕ್ಷ್ಮ ನೀರಾವರಿ ಯೋಜನೆ ಅಡಿ ತುಂತುರು ನೀರಾವರಿ ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನವನ್ನು ಒದಗಿಸಲಾಗುತ್ತದೆ.
ಯಾವೆಲ್ಲ ಯಂತ್ರಗಳನ್ನು ಪಡೆಯಲು ಸಬ್ಸಿಡಿ ದೊರೆಯಲಿದೆ ಗೊತ್ತಾ?
- ಮಿನಿ ಟ್ರ್ಯಾಕ್ಟರ್
- ಪವರ್ ಟಿಲ್ಲರ್
- ಕಳೆ ಕೊಚ್ಚುವಂತ ಯಂತ್ರ
- ಪವರ್ ವೀಡರ್
- ರೋಟೋವೇಟರ್
- ಪವರ್ ಸ್ಟ್ರೇಯರ್
- ಡೀಸೆಲ್ ಪಂಪ್ ಸೆಂಟ್
- ಮೊಟೋಕರ್ಟಗಳು
- ಪ್ಲೋರ್ ಮಿಲ್
- ಮಿನಿ ರೈಸ್ ಮಿಲ್
- ರಾಗಿ ಕ್ಲೀನಿಂಗ್ ಯಂತ್ರ
- ಚಿಲ್ಲಿಪೌಡರಿಂಗ್ ಯಂತ್ರ
- ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣದ ಯಂತ್ರ
ಇದನ್ನು ಓದಿ: ಪಡಿತರ ಚೀಟಿದಾರರಿಗೆ 10 ಲಕ್ಷ ನೀಡುತ್ತಿದ್ದು! ಜಸ್ಟ್ ಈ ಕೆಲಸ ಮಾಡಿದ್ರೆ ಸಾಕು
ಈ ಮೇಲ್ಕಂಡ ಯಂತ್ರಗಳನ್ನು ಖರೀದಿಸಲು ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಇಲಾಖೆಯಿಂದ ಸಹಾಯಧನ ದೊರೆಯಲಿದೆ.
ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಡಿತರ ಚೀತಿ
- ಪೋಟೋ
- ಜಮೀನಿನ ಪಹಣಿ
- ರೂ.100 ಬಾಂಡ್ ಪೇಪರ್
ಅರ್ಜಿ ಸಲ್ಲಿಕೆ ಹೇಗೆ.?
ಆಸಕ್ಕಿಯನ್ನು ಹೊಂದಿದ ರೈತರು ಅರ್ಜಿಗಳನ್ನು ಸಂಬಂಧಪಟ್ಟಂತಹ ನಿಮ್ಮ ವ್ಯಾಪ್ತಿಯ ರೈತರ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಅರ್ಜಿಯನ್ನು ಪಡೆದು, ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ಖರೀದಿಸಲು ಅರ್ಜಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳ ಇಲ್ಲವೇ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂಬುದಾಗಿ ಕೃಷಿ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನೀವು ಕೂಟ ಈರೀತಿ ಮಾಡಿಕೊಳ್ಳಬಹುದಾಗಿದೆ.
ಇತರೆ ವಿಷಯಗಳು:
ಈರುಳ್ಳಿ ಬೆಲೆ ಏರಿಕೆ! ರಿಯಾಯಿತಿ ದರದಲ್ಲಿ ಸರ್ಕಾರದಿಂದ ಈರುಳ್ಳಿ ಮಾರಾಟ ಆರಂಭ
ಜನ ಸಾಮಾನ್ಯರ ಮೇಲೆ ಮತ್ತೆ ಬರೆ ಎಳೆದ ಸರ್ಕಾರ.! ಹಾಲಿನ ದರ 1.5 ರೂ. ಹೆಚ್ಚಳ