ಆಭರಣ ಪ್ರಿಯರಿಗಾಗಿ ಶ್ರಾವಣದ ಮೊದಲ ದಿನದಿಂದಲೇ ಸಿಹಿ ಸುದ್ದಿ. ಬಜೆಟ್ ಬಳಿಕ ಇಳಿಕೆಯಾದ ಚಿನ್ನ, ಬೆಳ್ಳಿ ಬೆಲೆ, ಈಗ ಶ್ರಾವಣ ಮಾಸದ ಆರಂಭದಲ್ಲಿ ಮತ್ತಷ್ಟು ಇಳಿಕೆ ಕಂಡಿದೆ. ಆದರೆ, ಶ್ರಾವಣ ಮಾಸದ ಮೊದಲ ಸೋಮವಾರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ.
ಬಜೆಟ್ ನಲ್ಲಿ ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಮೇಲೆ ಕಸ್ಟಮ್ಸ್ ಸುಂಕದಲ್ಲಿ ಇಳಿಕೆಯಾದ ಪರಿಣಾಮ ಬಂಗಾರ, ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗಿತ್ತು. ಇನ್ನು ಮದುವೆ ಮತ್ತು ಶುಭ ಸಮಾರಂಭಗಳ ವೇಳೆಯಾಗಿ ಬೆಲೆ ಸ್ವಲ್ಪ ಏರಿಕೆಯಾದರೂ, ಈ ನಿರೀಕ್ಷೆಯಲ್ಲಿದ್ದ ಆಭರಣ ಪ್ರಿಯರಿಗೆ ಈಗ ಹೊಸ ಅವಕಾಶ ಸಿಕ್ಕಿದೆ.
ಷೇರು ಮಾರುಕಟ್ಟೆಯ ವ್ಯತ್ಯಾಸಗಳ ಆಧಾರದ ಮೇಲೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ನೀವೂ ಸಹ ಚಿನ್ನ, ಬೆಳ್ಳಿ ಖರೀದಿಗೆ ಯೋಜನೆ ಮಾಡಿದ್ದೀರಾ?

ಬೆಂಗಳೂರಿನಲ್ಲಿ ಚಿನ್ನದ ದರ
ಬೆಲೆ | 1GM | 10GM |
---|---|---|
22 ಕ್ಯಾರೆಟ್ (ಆಭರಣ ಚಿನ್ನ) | ರೂ. 6,469 | ರೂ. 64,690 |
24 ಕ್ಯಾರೆಟ್ (ಅಪರಂಜಿ) | ರೂ. 7,057 | ರೂ. 70,570 |
ದೇಶದ ಇತರೆ ನಗರಗಳಲ್ಲಿ ಚಿನ್ನದ ರೇಟ್
ನಗರ | 10GM ಚಿನ್ನದ ಬೆಲೆ |
---|---|
ಚೆನ್ನೈ | ರೂ. 64,490 |
ಮುಂಬೈ | ರೂ. 64,690 |
ಕೋಲ್ಕತ್ತಾ | ರೂ. 64,690 |
ನವದೆಹಲಿ | ರೂ. 64,840 |
ಇಂದಿನ ಬೆಳ್ಳಿ ದರ
ಇತ್ತ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದರೆ, ಬೆಳ್ಳಿ ದರದಲ್ಲೂ ಇಳಿಕೆ ಕಂಡುಬಂದಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರ, ರೂಪಾಯಿ ಮೌಲ್ಯ ಇತ್ಯಾದಿ ಕಾರಣಗಳಿಂದ ಬೆಳ್ಳಿ ದರ ವ್ಯತ್ಯಾಸವಾಗುತ್ತಿರುತ್ತದೆ.
ಬೆಂಗಳೂರು ಮತ್ತು ಇತರೆಡೆ ಬೆಳ್ಳಿ ದರ
ಬೆಲೆ | 10GM | 100GM | 1KG |
---|---|---|---|
ಬೆಂಗಳೂರು | ರೂ. 856.50 | ರೂ. 8,565 | ರೂ. 85,650 |
ಚೆನ್ನೈ | ರೂ. 90,800 | ||
ಮುಂಬೈ | ರೂ. 85,400 | ||
ಕೋಲ್ಕತ್ತಾ | ರೂ. 85,400 | ||
ನವದೆಹಲಿ | ರೂ. 85,400 |
ಹೀಗಾಗಿ, ಚಿನ್ನ ಮತ್ತು ಬೆಳ್ಳಿ ಖರೀದಿಗೆ ಇದು ಸುವರ್ಣಾವಕಾಶ. ಬೆಲೆ ಇಳಿಕೆಯಾದ ಈ ಸಮಯದಲ್ಲಿ ನೀವು ಆಭರಣ ಖರೀದಿಸಲು ಮುಂದಾದರೆ ಉತ್ತಮವಾಗಿರುತ್ತದೆ.
ಇತರೆ ವಿಷಯಗಳು :
ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ! ಅಪಘಾತದಲ್ಲಿ ಗಾಯಗೊಂಡವರಿಗೆ 1.5 ಲಕ್ಷ
ವಾಹನ ಸವಾರರೇ ಇಂದಿನಿಂದ ಈ ನಿಯಮಗಳು ಬದಲಾಗುತ್ತವೆ, ನಿಯಮ ಉಲ್ಲಂಘಿಸಿದರೆ ದಂಡ ಫಿಕ್ಸ್.