ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವುದರಿಂದ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗಾರರ ಮೇಲೆ ಪರಿಣಾಮವನ್ನು ಬೀರಿದೆ.
ಬಾಂಗ್ಲಾ ಬಿಕ್ಕಟ್ಟಿಗೂ ಮುನ್ನ ಕೋಲಾರದ APMC ಯಲ್ಲಿ 15 Kg ತೂಕದ ಒಂದು ಬಾಕ್ಸ್ ನ ಟೊಮೆಟೊದ ದರವು ಒಂದು 1100 ರೂ.ನಿಂದ 1200 ರೂಪಾಯಿವರೆಗೆ ಇತ್ತು. ಆದರೆ ಈಗಾ 350 ರಿಂದ 480 ರೂಪಾಯಿಗೆ ಕುಸಿದಿದೆ. ಕಳೆದ 15 ದಿನಗಳ ಹಿಂದೆ ಪ್ರತಿ Kgಗೆ 40 ರೂ. ಇದ್ದ ಚಿಲ್ಲರೆಯ ಟೊಮೆಟೊದ ಬೆಲೆ 12 ರೂ.ಗೆ ಕುಸಿದಿದ್ದು, ಬೆಳೆಗಾರರು ಈಗಾ ಕಂಗಾಲಾಗಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಬೆಳೆಯುವಂತಹ ಟೊಮೆಟೊವು ಪಶ್ಚಿಮ ಬಂಗಾಳದ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಅಲ್ಲಿಂದ ಬಾಂಗ್ಲಾದ ವಿವಿಧ ಮಾರುಕಟ್ಟೆಗಳಿಗೆ ಸರಬರಾಜು ಆಗುತ್ತದೆ. ಬಾಂಗ್ಲಾದಲ್ಲಿ ಬಿಕ್ಕಟಿನ ಪರಿಸ್ಥಿತಿ ಇರುವುದರಿಂದ ಟೊಮೆಟೊದ ಮಾರಾಟದಲ್ಲಿ ಅರ್ಧದಷ್ಟು ಇಳಿಕೆಯಾಗಿದೆ.
ಇಷ್ಟು ದಿನ ಪ್ರತಿದಿನ ಸುಮಾರು 50 ಲಾರಿಯ ಲೋಡ್ ನಷ್ಟು ಗುಣಮಟ್ಟದ ಟೊಮೆಟೊವು ಪಶ್ಚಿಮ ಬಂಗಾಳಕ್ಕೆ ರವಾನೆ ಮಾಡಲಾಗುತ್ತಿತ್ತು. ಆದರೆ ಈಗ 20 ಲೋಡ್ ಟೊಮೆಟೋ ಮಾತ್ರ ಕಳುಹಿಸಲಾಗುತ್ತಿದೆ. ಈ ಕಾರಣದಿಂದ ಬೆಲೆಯು ಕುಸಿತವಾಗಿ ಟೋಮೇಟೊ ಬೆಳೆಗಾರರು ಕಂಗಾಲಾಗಿದ್ದಾರೆ.
ಇತರೆ ವಿಷಯಗಳು:
ನಾಳೆ ಆಸ್ಪತ್ರೆಗೆ ಹೋಗೋ ಮುನ್ನಾ ಗಮನಿಸಿ! 24 ಗಂಟೆ OPD ಸೇವೆ ಬಂದ್
ಬ್ಯಾಂಕ್ ಸಾಲಗಾರರಿಗೆ ಶಾಕ್! ಇಂದಿನಿಂದ ಸಾಲಗಳ ಮೇಲಿನ ಬಡ್ಡಿದರ ಬೇಸಿಸ್ ಪಾಯಿಂಟ್ ಹೆಚ್ಚಳ!