ಗ್ರಾ.ಪಂ ನೌಕರರಿಗೆ ಸಿಗಲಿದೆ 50 ಸಾವಿರ ರೂ. ವೈದ್ಯಕೀಯ ವೆಚ್ಚ! ರಾಜ್ಯ ಸರ್ಕಾರದ ಆದೇಶ

ಹಲೋ ಸ್ನೇಹಿತರೆ, ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಗ್ರಾಮಪಂಚಾಯಿತಿ ನೌಕರರಿಗೆ 50 ಸಾವಿರ ರೂ. ವೈದ್ಯಕೀಯ ವೆಚ್ಚ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶ ನೀಡಿದೆ.

50 thousand Medical expenses

ರಾಜ್ಯ ಸರ್ಕಾರವು ಆರೋಗ್ಯ ವೆಚ್ಚ ಭರಿಸುವ ಈ ಕುರಿತು ಮಹತ್ವದ ಆದೇಶ ಹೊರಡಿಸಿದ್ದು, ಗ್ರಾಮ ಪಂಚಾಯಿತಿ ನೌಕರರು ಅನಾರೋಗ್ಯಕ್ಕೆ ಒಳಗಾದಾಗ ಚಿಕಿತ್ಸಾ ವೆಚ್ಚವನ್ನು ಜಿಲ್ಲಾ ಪಂಚಾಯಿತಿ ಆಶ್ವಾಸನಾ ನಿಧಿಯಿಂದ ಭರಿಸುವಂತೆ ಸೂಚನೆ ನೀಡಿದೆ.

ತೀವ್ರ ಸ್ವರೂಪದ ಕಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗ ಶಸ್ತ್ರ ಚಿಕಿತ್ಸೆ, ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್, ಡಯಾಲಿಸಿಸ್, ಮೂತ್ರ ಪಿಂಡ ಕಾಯಿಲೆಗಳಂತ ಆರೋಗ್ಯ ಸಮಸ್ಯೆಗಳಿಗೆ ಗ್ರಾಮಪಂಚಾಯಿತಿ ನೌಕರರು ತುತ್ತಾದಲ್ಲಿ ವೈದ್ಯಕೀಯ ವೆಚ್ಚ ಗರಿಷ್ಠ 50 ಸಾವಿರ ರೂ.ಗಳನ್ನು ಒಂದು ಬಾರಿ ಮಾತ್ರ ನೀಡಲು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಲಾಗಿದೆ.

ಕೋವಿಡ್‌ ಸಂದರ್ಭದಲ್ಲಿ ಕೋವಿಡ್‌ ಸಾಂಕ್ರಮಿಕದಿಂದ ಮರಣ ಹೊಂದಿದ ಕುಟುಂಬದವರಿಗೆ ಪರಿಹಾರ ನೀಡಲು ಹಾಗೂ ಅನಾರೋಗ್ಯ ಉಂಟಾದಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಜಿಲ್ಲಾ ಪಂಚಾಯಿತಿಗಳಲ್ಲಿ ಆಶ್ವಾಶನ ನಿಧಿ ರಚಿಸಲು ಆದೇಶಿಸಲಾಗಿತ್ತು.

ಇತರೆ ವಿಷಯಗಳು:

6-10ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ಸ್ಕಾಲರ್ ಶಿಪ್! ಅರ್ಜಿ ಆಹ್ವಾನಿಸಲಾಗಿದೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಇಂದೇ ಅರ್ಜಿ ಸಲ್ಲಿಸಿ ಉಚಿತ ಸಿಲಿಂಡರ್ ಪಡೆಯಿರಿ.

Leave a Reply

Your email address will not be published. Required fields are marked *

rtgh