ಹಲೋ ಸ್ನೇಹಿತರೆ, ರಾಜ್ಯಾದ್ಯಂತ ಕಂದಾಯ, ಅರಣ್ಯ, ಶಿಕ್ಷಣ, ಲೋಕೋಪಯೋಗಿ ಇಲಾಖೆ ಹಾಗೆಯೇ ವಿವಿಧ ಇಲಾಖೆಗಳಿಗೆ ಸೇರಿದ 1.41 ಕೋಟಿ ಎಕರೆ ಸರ್ಕಾರಿ ಜಮೀನು ಇದೆ ಎಂದು ಖಚಿತವಾಗಿದೆ. ರಾಜ್ಯದ್ಯಂತ ಸೆಪ್ಟೆಂಬರ್ ನಿಂದ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡುವ ಕಾರ್ಯಾಚರಣೆ ನೆಡೆಸಲಾಗುವುದು. ಸರ್ಕಾರಿ ಭೂಮಿ ಸಂರಕ್ಷಣೆಗಾಗಿ ಆರಂಭಿಸಿದ ಲ್ಯಾಂಡ್ ಬೀಟ್ ಆಯಪ್ ಆಧಾರದ ಮೇಲೆ ತೆರವು ಕಾರ್ಯಚರಣೆ ನಡೆಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕಳೆದ 8 ತಿಂಗಳಿನಿಂದ ಗ್ರಾಮ ಆಡಳಿತಾಧಿಕಾರಿಗಳು ಅವರ ವೃತ್ತದ ಸರ್ಕಾರಿ ಜಮೀನು ಎಷ್ಟಿದೆ ಎಂಬ ವಿವರಗಳನ್ನು ಲ್ಯಾಂಡ್ ಬೀಟ್ ಆಯಪ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಜಿಲ್ಲಾವಾರು, ತಾಲೂಕುವಾರು, ಗ್ರಾಮವಾರು, ಸರ್ವೇ ನಂಬರ್ ವಾರು ಲೊಕೇಶನ್ ಮತ್ತು ವಿಸ್ತೀರ್ಣದ ಮಾಹಿತಿಯನ್ನು ಪಡೆಯಲಾಗಿದೆ. ಎರಡನೇ ಹಂತದಲ್ಲಿ 14 ಲಕ್ಷ ಸರ್ವೇ ನಂಬರ್ ಗಳಿಗೆ ಸ್ವತಃ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಪರಿಶೀಲನೆ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ರಾಜ್ಯದ ನಾರಿಯರಿಗೆ ಸಿಹಿ ಸುದ್ದಿ ; ಇದೇ ದಿನ ಬಿಡುಗಡೆಯಾಗಲಿದೆ ಗ್ಯಾರಂಟಿ ಅನುದಾನ
ಅನೇಕ ಕಡೆ ಒತ್ತುವರಿ ಭೂಮಿ ಇರುವುದು ಪತ್ತೆಯಾಗಿದ್ದು, ಸೆಪ್ಟೆಂಬರ್ ನಿಂದ ರೈತರ ಭೂಮಿ ಹೊರತುಪಡಿಸಿ ಉಳಿದೆಲ್ಲ ಒತ್ತುವರಿಗಳನ್ನು ತಹಶೀಲ್ದಾರ್ ಗಳ ಮೂಲಕ ತೆರವು ಮಾಡಿಸಲಾಗುವುದು. ರಾಜ್ಯದಾದ್ಯಂತ 4.8 ಕೋಟಿ ಜಮೀನಿನ ಮಾಲೀಕತ್ವ ಇದ್ದು, ಪಹಣಿಗಳಿಗೆ ಆಧಾರ್ ದೃಢೀಕರಣ ಕಾರ್ಯ ಸಹ ವೇಗವಾಗಿ ನಡೆಯುತ್ತಿದೆ. 2.68 ಕೋಟಿ ರೈತರ ಖಾತೆಗಳಿಗೆ ಆಧಾರ್ ಸೀಡಿಂಗ್ ಕಾರ್ಯ ಮುಕ್ತಾಯವಾಗಿದ್ದು, ಈ ತಿಂಗಳಾಂತ್ಯಕ್ಕೆ ಕಾರ್ಯವನ್ನು ಪೂರ್ಣಗೊಳಿಸಲು ಕೊನೆ ಅವಕಾಶ ನೀಡಲಾಗಿದೆ.
ಈ ಆಧಾರ್ ಸೀಡಿಂಗ್ ನಿಂದಾಗಿ ಅಕ್ರಮವಾಗಿ ಜಮೀನು ಮಾರಾಟ ಮಾಡುವುದು ಸಂಪೂರ್ಣ ಬಂದ್ ಆಗಲಿದೆ. ಮುಖ್ಯವಾಗಿ ದಾಖಲೆಗಳಲ್ಲಿ ಕೈಬಿಟ್ಟು ಹೋಗಿರುವ ಮತ್ತು ಒತ್ತುವರಿಯಾಗಿದ್ದಂತಹ ಸರ್ಕಾರದ ಜಮೀನುಗಳ ವಿವರಗಳು ದೊರೆತಿದ್ದು, ರಾಜ್ಯದ್ಯಂತ 2.20 ಲಕ್ಷ ಎಕರೆ ಜಮೀನು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಗುರುತಿಸದ ಆಸ್ತಿಗಳು ಪತ್ತೆಯಾಗಿದೆ. ಆಧಾರ್ ಸೀಡಿಂಗ್ ನಿಂದಾಗಿ 3.50 ಲಕ್ಷ ಎಕರೆ ಸರ್ಕಾರಿ ಭೂಮಿ ಪತ್ತೆಯಾಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಇತರೆ ವಿಷಯಗಳು:
ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ, ಪಿಎಂ ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ.
SSLC ವಿದ್ಯಾರ್ಥಿಗಳಿಗೆ ಸಿಗಲ್ಲಿದೆ ಉಚಿತ ಲ್ಯಾಪ್ಟಾಪ್, ಇಂದೇ ಈ ಕಚೇರಿಗೆ ಭೇಟಿ ನೀಡಿ.