ಬೆಳ್ಳುಳ್ಳಿ ಬೆಲೆ ಕೆಜಿಗೆ 400 ರೂಪಾಯಿಗಳ ಗಡಿಯನ್ನು ದಾಟಿದೆ. ಫೆಬ್ರವರಿಯಲ್ಲಿ 500 ರೂ. ಗಡಿಯನ್ನು ದಾಟಿದ ಬೆಳ್ಳುಳ್ಳಿ ಬೆಲೆ ಪ್ರಸಕ್ತ ವರ್ಷದಲ್ಲಿ ಸತತ 2ನೇ ಬಾರಿಗೆ ಏರಿಕೆಯಾಗಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಶ್ರಾವಣ ಮಾಸದೊಂದಿಗೆ ಹಬ್ಬಗಳನ್ನು ಸಾಲು ಆರಂಭವಾಗಿದ್ದು, ಮದುವೆಯ ಸಮಾರಂಭಗಳು ಹೆಚ್ಚಾಗಿರುವುದರಿಂದ ಬೆಳ್ಳುಳ್ಳಿಗೆ ಬೇಡಿಕೆಯು ಸಹ ಹೆಚ್ಚಾಗಲಿದ್ದು, ಬೆಲೆಯು ಮತ್ತಷ್ಟು ಏರಿಕೆಯಾಗುವಂತಹ ಸಾಧ್ಯತೆಯು ಕೂಡ ಇದೆ. ದೇಶದ ಒಟ್ಟು ಬೆಳ್ಳುಳ್ಳಿಯ ಉತ್ಪಾದನೆಯಲ್ಲಿ ಮಧ್ಯಪ್ರದೇಶವು ಶೇ. 70ರಷ್ಟು ಪಾಲನ್ನು ಹೊಂದಿದೆ. ಮಧ್ಯಪ್ರದೇಶದಿಂದ ಆವಕ ಇಳಿಕೆಯಾಗಿರುವುದರಿಂದ ಈ ವರ್ಷದಲ್ಲಿ 2ನೇ ಸಲವು ಗ್ರಾಹಕರಿಗೆ ಬೆಲೆಯ ಏರಿಕೆಯ ಬಿಸಿ ತಟ್ಟಿದೆ.
ಕೇಂದ್ರ ಸರ್ಕಾರ ದೇಶದ ರೈತರ ಹಿತ ದೃಷ್ಟಿಯಿಂದ ಬೆಳ್ಳುಳ್ಳಿಯ ಮೇಲಿನ ಆಮದು ಸುಂಕವನ್ನು 100ರಷ್ಟು ಹೆಚ್ಚಿಸಿದ್ದು, ಅತಿ ಹೆಚ್ಚು ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಬೆಳೆಯುವ ಈಜಿಪ್ಟ್, ಇರಾನ್ ನಿಂದ ಬೆಳ್ಳುಳ್ಳಿಯ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಮದು ಮಾಡಿಕೊಂಡರೂ ಸ್ಥಳೀಯವಾಗಿಯೆ ಕಡಿಮೆಯ ದರಕ್ಕೆ ಮಾರಾಟವನ್ನು ಮಾಡುವುದು ಕಷ್ಟವಾಗುತ್ತದೆ.
ಇದನ್ನೂ ಸಹ ಓದಿ: ಆಗಸ್ಟ್ 31st ಆರ್ಸಿ ಮತ್ತು ಡಿಎಲ್ ಇರುವವರು ಈ ಕೆಲಸ ಮಾಡಿ! ಇಲ್ಲದಿದ್ದರೆ ಲೈಸೆನ್ಸ್ ಆಗಲಿದೆ ರದ್ದು
ರಾಜ್ಯದ ಅನೇಕ ಕಡೆ ರೈತರು ಬೆಳ್ಳುಳ್ಳಿಯ ಬೆಳೆಯುತ್ತಾರೆ. ಆದರೆ ಆವಕವು ಕಡಿಮೆಯಾಗಿ ಬೇಡಿಕೆಯನ್ನು ಹೆಚ್ಚಾಗುತ್ತಿರುವುದರಿಂದ ದರ ಏರಿಕೆಯಾಗಿದೆ.
ಈರುಳ್ಳಿ ಬೆಲೆ ಸಹ ಏರಿಕೆಯ ಹಾದಿಯಲ್ಲಿದೆ. ಭಾರಿ ಮಳೆಯಿಂದ ಗುಣಮಟ್ಟದ ಈರುಳ್ಳಿಯು ಮಾರುಕಟ್ಟೆಗೆ ಪೂರೈಕೆಯು ಆಗುತ್ತಿಲ್ಲ. ಚಿಲ್ಲರೆಯ ಮಾರುಕಟ್ಟೆಯಲ್ಲಿ ಕೆಜಿಗೆ ಈರುಳ್ಳಿ ಬೆಲೆ 52 ರೂ. ದಾಟಿದ್ದು, ಸೂಪರ್ ಮಾರ್ಕೆಟ್ ನಲ್ಲಿ 80 ರೂಪಾಯಿಗಳಿಗೆ ತಲುಪಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಬೆಳೆದ ಈರುಳ್ಳಿಯು ಮಳೆಯಿಂದಾಗಿ ಹಾನಿಯಾಗಿದೆ. ಅಲ್ಪಸ್ವಲ್ಪ ಪ್ರಮಾಣದ ಈರುಳ್ಳಿಯನ್ನು ರೈತರು ಮಾರುಕಟ್ಟೆಗಳಿಗೆ ತಂದರೂ ಅದು ಗುಣಮಟ್ಟದಿಂದ ಕೂಡಿಲ್ಲ. ಕೆಲವು ವರ್ತಕರು ಈರುಳ್ಳಿ ದಾಸ್ತಾನು ಮಾಡಿ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಚಿಲ್ಲರೆಯ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.
ಇತರೆ ವಿಷಯಗಳು:
ಪಾನ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ! ಈ ರೀತಿಯ ದಾಖಲೆಯಾಗಿ ಸಹ ಬಳಸಬಹುದು
ಮಧ್ಯಮ ವರ್ಗದವರಿಗೆ ಎಚ್ಚರಿಕೆ.. ಅಕ್ಟೋಬರ್ 1 ರಿಂದ ಹೊಸ ನಿಯಮ!