ಹಲೋ ಸ್ನೇಹಿತರೆ, ರಾಜ್ಯದಲ್ಲಿನ ನಿವೃತ್ತ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, 7 ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳನ್ನು ಪರಿಷ್ಕರಿಸಿ ಏರಿಕೆ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ, ದಿನಾಂಕ: 22.07.2024ರ ಆದೇಶದಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಯನ್ನು ಮತ್ತು ಪಿಂಚಣಿಯನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸಲು ಆದೇಶಗಳನ್ನು ನೀಡಿರಲಾಗಿರುತ್ತದೆ.
ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರ ಅವಕಾಶಗಳಂತೆ ಪರಿಷ್ಕೃತ ವೇತನ ಶ್ರೇಣಿಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಲು ದಿನಾಂಕ: 23.08.2024ರಲ್ಲಿ ಸರ್ಕಾರ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
ಇದನ್ನು ಓದಿ: ಯೂಟ್ಯೂಬ್ ವೀಕ್ಷಕರಿಗೂ ತಟ್ಟಿದ ಬೆಲೆ ಏರಿಕೆ ಬಿಸಿ! ಪ್ರೀಮಿಯಂ ದರ 58% ಹೆಚ್ಚಳ
ಸರ್ಕಾರಿ ನೌಕರರ ವಯೋನಿವೃತ್ತಿ ವೇತನ, ವಿಶ್ರಾಂತಿ ನಿವೃತ್ತಿ ವೇತನ, ಅಶಕ್ಷತಾ ನಿವೃತ್ತಿ ವೇತನ, ಪರಿಹಾರ ನಿವೃತ್ತಿ ವೇತನ ಹಾಗೂ ಅನುಕಂಪದ ಭತ್ಯೆಗಳನ್ನು ಸಹ ಪರಿಷ್ಕರಿಸಲಾಗಿದ್ದು, ಕನಿಷ್ಟ ಪಿಂಚಣಿಯನ್ನು ಮಾಸಿಕ 8,500 ರೂ.ಗಳಿಂದ 13,500 ರೂ.ಗಳಿಗೆ ಹಾಗೂ ಗರಿಷ್ಠ ಮಿತಿಯನ್ನು ಮಾಸಿಕ 75,300 ರೂ.ಗಳಿಂದ 1,20,600 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಕುಟುಂಬ ನಿವೃತ್ತಿ ವೇತನವನ್ನು ಕನಿಷ್ಠ 13,500 ರೂ.ಗಳಿಗೆ ಹಾಗೂ ಗರಿಷ್ಠ 80,400 ರೂ.ಗಳಿಗೆ ಪರಿಷ್ಕರಿಸಲಾಗಿದ್ದು, ಆಗಸ್ಟ್ 1 ರಿಂದಲೇ ಈ ಪರಿಷ್ಕರಣೆಯ ಆರ್ಥಿಕ ಎಲ್ಲಾ ನೌಕರರಿಗೆ ಲಾಭ ಸಿಗಲಿದೆ.
ಇತರೆ ವಿಷಯಗಳು:
ಜನಸಾಮಾನ್ಯರಿಗೆ ಬೆಳ್ಳುಳ್ಳಿ ಶಾಕ್! 400 ರೂ. ದಾಟಿದ ಬೆಳ್ಳುಳ್ಳಿ ದರ
ಪ್ರೀಮಿಯಂ ಮದ್ಯದ ತೆರಿಗೆ ಕಡಿಮೆ…! ಬಿಯರ್ ಬೆಲೆ ಹೆಚ್ಚಳ!