ವಿಶ್ವದ ಅತ್ಯಂತ ಶ್ರೀಮಂತ ದೇವಾಲಯ ತಿರುಪತಿಯ ತಿರುಮಲ ವೆಂಕಟೇಶ್ವರನ ದೇವಾಲಯದ ಲಡ್ಡು ಪ್ರಸಾದಕ್ಕೆ KMF ನಿಂದ ನಂದಿನಿ ತುಪ್ಪದ ಪೂರೈಕೆಯ ಪುನರಾರಂಭವಾಗಿದೆ.
1 ವರ್ಷದಿಂದ ನಂದಿನಿ ತುಪ್ಪದ ಪೂರೈಕೆಯು ಸ್ಥಗಿತವಾಗಿತ್ತು. ಇದೀಗ ಮತ್ತೆ KMF ಗೆ ಟೆಂಡರ್ ದೊರೆತಿದ್ದು, ಮೊದಲ ತುಪ್ಪದ ಟ್ಯಾಂಕರ್ ಬುಧವಾರದಂದು ತಿರುಮಲಕ್ಕೆ ತೆರಳಿದೆ. ಕಳೆದ 1 ವರ್ಷದಿಂದ ಲಡ್ಡು ಪ್ರಸಾದದಲ್ಲಿ ಇಲ್ಲವಾಗಿದ್ದ ನಂದಿನಿಯ ತುಪ್ಪದ ಸ್ವಾದವು ಮತ್ತೆ ಲಭ್ಯವಾಗಲಿದೆ.
ನಷ್ಟದ ನೆಪದಲ್ಲಿ ಕಳೆದ ವರ್ಷ ತಿರುಪತಿಗೆ ನಂದಿನಿಯ ತುಪ್ಪವನ್ನು ಸರಬರಾಜು KMF ಸ್ಥಗಿತ ಮಾಡಿದ್ದು 2013-14ನೇ ಸಾಲಿನಿಂದ ನಿರಂತರವಾಗಿ 5,000 ಮೆ.ಟನ್ ತುಪ್ಪವನ್ನು ತಿರುಪತಿಯ ಲಡ್ಡುವಿನ ಪ್ರಸಾದ ತಯಾರಿಕೆ ಗೆ ಪೂರೈಕೆಯನ್ನು ಮಾಡಲಾಗಿತ್ತು. ಕಳೆದ ವರ್ಷದಿಂದ ಕಡಿಮೆ ಮೊತ್ತಕ್ಕೆ ತುಪ್ಪವನ್ನು ಮಾರಾಟ ಮಾಡಲು ಒಪ್ಪದೇ KMF ಟೆಂಡರ್ ನಿಂದ ಹಿಂದೆಯೆ ಸರಿದಿತ್ತು. ಇದೀಗ ಮತ್ತೆಯೆ ಟೆಂಡರ್ ದೊರೆತಿದ್ದು, 2024- 25 ನೇ ಸಾಲಿನಲ್ಲಿ ಪ್ರಾರಂಭವಾಗಿ 350 ಮೆ.ಟನ್ ನಂದಿನಿಯ ತುಪ್ಪದ ಸರಬರಾಜನ್ನು ಮಾಡಲಾಗುವುದು.
ಇತರೆ ವಿಷಯಗಳು:
ಜನಸಾಮಾನ್ಯರಿಗೆ ಬೆಳ್ಳುಳ್ಳಿ ಶಾಕ್! 400 ರೂ. ದಾಟಿದ ಬೆಳ್ಳುಳ್ಳಿ ದರ
ಪ್ರೀಮಿಯಂ ಮದ್ಯದ ತೆರಿಗೆ ಕಡಿಮೆ…! ಬಿಯರ್ ಬೆಲೆ ಹೆಚ್ಚಳ!