ಹಲೋ ಸ್ನೇಹಿತರೆ, ಇನ್ನೇನು ಕೆಲವೇ ದಿನಗಳಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಧ್ಯವಾರ್ಷಿಕ ಪರೀಕ್ಷೆ ಆರಂಭವಾಗಲಿದ್ದೂ ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಗ್ ಶಾಕ್ ನೀಡಿದ್ದು, ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯಂತೆಯೇ ಮಧ್ಯವಾರ್ಷಿಕ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ.
ಈ ವರ್ಷ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ಮಂಡಳಿ ಹಂತದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ ಶಾಲೆಗಳಿಗೆ ಲಾಗಿನ್ ಸೇವೆ ನೀಡಲು ಮುಂದಾಗಿದೆ. ಆದರೆ ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆ ಮುದ್ರಣಕ್ಕೆ ಯಾವುದೇ ಅನುದಾನವನ್ನು ಇದುವರೆಗೂ ಶಾಲೆಗಳಿಗೆ ನೀಡಿಲ್ಲ.
ಇದನ್ನು ಸಹ ಓದಿ: ಪಡಿತರ ಚೀಟಿದಾರರಿಗೆ 10 ಲಕ್ಷ ನೀಡುತ್ತಿದ್ದು! ಜಸ್ಟ್ ಈ ಕೆಲಸ ಮಾಡಿದ್ರೆ ಸಾಕು
ಇಲಾಖೆಯ ಈ ನಿರ್ಧಾರಕ್ಕೆ ಪೋಷಕರ ವಲಯದಲ್ಲಿ ವಿರೋಧ ಕೂಡಾ ಕೇಳಿ ಬಂದಿದ್ದು, ಪ್ರಸ್ತುತ ರಾಜ್ಯ ಸರ್ಕಾರವು ಶೈಕ್ಷಣಿಕ ವರ್ಷದ ನಡುವೆಯೇ ಈ ರೀತಿ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ವಿದ್ಯಾರ್ಥಿಗಳ, ಶಿಕ್ಷಕರ ಹಾಗೂ ತಜ್ಞರ ಅಭಿಪ್ರಾಯಗಳನ್ನು ಪಡೆಯದೆ ಈ ರೀತಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದನ್ನು ಸರ್ಕಾರವು ನಿಲ್ಲಿಸಬೇಕು. ಕೂಡಲೇ ಮಂಡಳಿ ಪ್ರಶ್ನೆ ಪತ್ರಿಕೆಗಳನ್ನು ಕೈಬಿಟ್ಟು ಶಾಲಾ ಮಟ್ಟದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ರಚಿಸವಂತೆ ಮನವಿ ಕೇಳಿ ಬಂದಿದೆ.
ಇತರೆ ವಿಷಯಗಳು:
ಗಣೇಶ ಹಬ್ಬದಂದೇ ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ!
ಸರ್ಕಾರದ ಜನಪ್ರಿಯ ಯೋಜನೆಯ ಹೆಸರು ಬದಲು.! ಹಾಗಾದ್ರೆ ಯಾವುದು ಗೊತ್ತಾ ಈ ಸ್ಕೀಮ್??