ಎಸ್‌ಬಿಐ ಭರ್ಜರಿ ಆಫರ್.!!‌ ತಿಂಗಳಿಗೆ 10 ಸಾವಿರದಿಂದ 5 ಲಕ್ಷ ಗಳಿಸಿ

ಹಲೋ ಸ್ನೇಹಿತರೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯೂಚುವಲ್ ಫಂಡ್ ಸಂಸ್ಥೆಯು ನಿರ್ವಹಿಸುವ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ 3 ವರ್ಷದಲ್ಲಿ ಸಖತ್ ಜನಪ್ರಿಯತೆಯನ್ನು ಪಡೆದಿದೆ. ಶೇಕಡವಾರು 18.56 CAGRನಲ್ಲಿ ಈ ಫಂಡ್ ಲಾಭ ತಂದಿದೆ. 2021ರ ಆಗಸ್ಟ್ 31ರಂದು ಆರಂಭವಾದ ಈ ಫಂಡ್​ನಲ್ಲಿ 10,000 ರೂ ಎಸ್​ಐಪಿ ಆರಂಭಿಸಿದ್ದರೆ ಇವತ್ತು ಆ ಹೂಡಿಕೆ 4.8 ಲಕ್ಷ ರೂ ಆಗಿರುತ್ತಿತ್ತು.

SIP in SBI balanced advantage fund
SIP in SBI balanced advantage fund

ಎಸ್​ಐಪಿ ಮೂಲಕ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವುದು ಜನಪ್ರಿಯ ಆಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಹಲವು ಮ್ಯುಚುವಲ್ ಫಂಡ್​ಗಳು ಉತ್ತಮ ರಿಟರ್ನ್ಸ್ ನೀಡಿವೆ. ಎಸ್​ಬಿಐ ಮ್ಯೂಚುವಲ್ ಫಂಡ್ ಸಂಸ್ಥೆ ಪ್ರಕಟಿಸಿರುವ ಫ್ಯಾಕ್ಟ್​ಶೀಟ್ ಮಾಹಿತಿ ಪ್ರಕಾರ ಅದರ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ (SBI Balanced Advantage Fund) ಕಳೆದ ಮೂರು ವರ್ಷದಲ್ಲಿ ಶೇ. 18.56ರ ಸಿಎಜಿಆರ್​ನಲ್ಲಿ ಹೂಡಿಕೆಯ ಮೌಲ್ಯ ಹೆಚ್ಚಿಸಿದೆ. ಈ ಮಟ್ಟದ ಸಿಎಜಿಆರ್ ಉತ್ತಮ ದರ ಎನಿಸುತ್ತದೆ.

ಮೂರು ವರ್ಷಗಳ ಹಿಂದೆ ನೀವು ಈ ಮ್ಯೂಚುವಲ್ ಫಂಡ್​ನಲ್ಲಿ 10,000 ರೂಗಳ ಎಸ್​ಐಪಿ ಆರಂಭಿಸಿದ್ದರೆ ಇವತ್ತು ನಿಮ್ಮ ಹೂಡಿಕೆ 4.80 ಲಕ್ಷ ರೂ ಆಗಿರುತ್ತಿತ್ತು. ನಿಮ್ಮ 3.60 ಲಕ್ಷ ರೂ ಹೂಡಿಕೆಗೆ ಕೇವಲ ಮೂರು ವರ್ಷದಲ್ಲಿ ಒಂದೂಕಾಲು ಲಕ್ಷ ರೂ ಲಾಭ ಸಿಗುವುದು ಸಣ್ಣ ವಿಷಯವಲ್ಲ. ಇಷ್ಟೇ ಮೊತ್ತದ ಹಣವನ್ನು ನೀವು ಬ್ಯಾಂಕ್ ಆರ್​ಡಿ ಸ್ಕೀಮ್​ಗೆ ಹಾಕಿದ್ದರೆ 4 ಲಕ್ಷ ರೂ ಸಿಗುತ್ತಿತ್ತು.

ಇದನ್ನು ಕೂಡ ಓದಿ: 20 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್‌ಗೆ ಕಡಿವಾಣ!

ಎಸ್​ಬಿಐನ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಆರಂಭವಾಗಿದ್ದೇ ಮೂರು ವರ್ಷದ ಹಿಂದೆ. 2021ರ ಆಗಸ್ಟ್ 31ರಂದು ಈ ಫಂಡ್ ಶುರುವಾಗಿದೆ. ಕಳೆದ 3 ವರ್ಷದಲ್ಲಿ ಈ ಫಂಡ್ ನಿರ್ವಹಿಸುತ್ತಿರುವ ಒಟ್ಟು ನಿಧಿಯು 32,440 ಕೋಟಿ ರೂ ಎಂದು ತಿಳಿದುಬಂದಿದೆ. ಅಲ್ಪ ಅವಧಿಯಲ್ಲಿ ಇಷ್ಟು ಪ್ರಮಾಣದ ಹೂಡಿಕೆಯನ್ನು ಆಕರ್ಷಿಸಿರುವುದು ಸಾಮಾನ್ಯವಲ್ಲ.

ಎಸ್​ಐಪಿಯತ್ತ ಜನ ಮುಗಿಬೀಳಲು ಏನು ಕಾರಣ? ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಹೊಂದುವ ಮುನ್ನ ನೀವು ತಿಳಿಯಬೇಕಾದ್ದೇನು?

ಎಸ್​ಬಿಐ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಈಕ್ವಿಟಿ ಮತ್ತು ಡೆಟ್ ವಿಭಾಗಗಳಲ್ಲಿ ಹೂಡಿಕೆ ಮಾಡುತ್ತದೆ. ಶೇ. 39.01ರಷ್ಟು ಫಂಡ್ ಕ್ಯಾಷ್ ಸೆಕ್ಟರ್​ನಲ್ಲಿ ಹಂಚಿಕೆ ಆಗುತ್ತದೆ. ಈಕ್ವಿಟಿಯಲ್ಲಿ ಶೇ. 30.37 ಮತ್ತು ಡೆಟ್​ನಲ್ಲಿ ಶೇ. 27.07 ಫಂಡ್ ಹೂಡಿಕೆ ಆಗುತ್ತದೆ. ಶೇ. 3.54ರಷ್ಟು ಹೂಡಿಕೆ ರಿಯಲ್ ಎಸ್ಟೇಟ್​ಗೆ ಹಾಕುತ್ತದೆ. ಈ ಮೂಲಕ ಮ್ಯೂಚುವಲ್ ಫಂಡ್ ಸಮತೋಲನದ ಹೂಡಿಕೆ ಮಾಡುತ್ತದೆ. ತೀರಾ ರಿಸ್ಕಿ ಎನಿಸುವ ಹೂಡಿಕೆ ಅದರದ್ದಲ್ಲ. ಹೀಗಾಗಿ, ದಿನೇ ದಿನೇ ಈ ಮ್ಯುಚುವಲ್ ಫಂಡ್ ಹೆಚ್ಚು ಜನರ ವಿಶ್ವಾಸ ಗಳಿಸುತ್ತಿದೆ.

ಇತರೆ ವಿಷಯಗಳು:

ಸರ್ಕಾರದ ಜನಪ್ರಿಯ ಯೋಜನೆಯ ಹೆಸರು ಬದಲು.! ಹಾಗಾದ್ರೆ ಯಾವುದು ಗೊತ್ತಾ ಈ ಸ್ಕೀಮ್??

ಈ ಹಳೆಯ ವಸ್ತುಗಳು ನಿಮ್ಮ ಬಳಿ ಇದ್ರೆ ಗುಡ್‌ ನ್ಯೂಸ್!‌ ಕನಿಷ್ಠ ಬೆಲೆಯಲ್ಲಿ ಖರೀದಿಗೆ ಆದೇಶ

Leave a Reply

Your email address will not be published. Required fields are marked *

rtgh