ಹಲೋ ಸ್ನೇಹಿತರೇ, ಸರ್ಕಾರದಿಂದ ಇದೀಗ ನ್ಯೂ ಸ್ಕೀಮ್ ಬಂದಿದ್ದು. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರನ್ನು ಈಗ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ವಿಮಾ ಯೋಜನೆಯಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಪ್ರಮುಖ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕ್ರಮವು ಆರು ಕೋಟಿ ಹಿರಿಯ ನಾಗರಿಕರನ್ನು ಹೊಂದಿರುವ ಸುಮಾರು 4.5 ಕೋಟಿ ಕುಟುಂಬಗಳಿಗೆ ಕುಟುಂಬ ಆಧಾರದ ಮೇಲೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
“ಈ ಅನುಮೋದನೆಯೊಂದಿಗೆ, 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರು ಅವ್ರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಎಬಿ ಪಿಎಂ ಹಾಗೂ ಜೆಎವೈ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಇದನ್ನು ಸಹ ಓದಿ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ‘ಇಂಗ್ಲೀಷ್ ಮೀಡಿಯಂ ತರಗತಿ’! ರಾಜ್ಯ ಸರ್ಕಾರದಿಂದ ಸಿಕ್ತು ಅನುಮೋದನೆ
ಅರ್ಹರಾದ ಹಿರಿಯ ನಾಗರಿಕರಿಗೆ AB ಪಿಎಂ-ಜೆಎವೈ ಅಡಿಯಲ್ಲಿ ಹೊಸದಾದ ವಿಶಿಷ್ಟವಾದ ಕಾರ್ಡ್ ನೀಡಲಾಗುವುದು.
ಈಗಾಗಲೇ ಎಬಿ ಪಿಎಂ ಮತ್ತು ಜೆಎವೈ ಅಡಿಯಲ್ಲಿ ಬರುವಂತಹ ಕುಟುಂಬಗಳಿಗೆ ಸೇರಿದ 70 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ತಮಗಾಗಿ ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಟಾಪ್-ಅಪ್ ರಕ್ಷಣೆಯನ್ನು ಪಡೆಯುತ್ತಾರೆ (ಇದನ್ನು ಅವರು 70 ವರ್ಷಕ್ಕಿಂತ ಕಡಿಮೆಯ ವಯಸ್ಸಿನ ಕುಟುಂಬದ ಇತರ ಸದಸ್ಯರೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ) ಎಂದು ಪ್ರಕಟಣೆಯನ್ನು ತಿಳಿಸಿದೆ.
ಇತರೆ ವಿಷಯಗಳು:
ಮಧ್ಯವಾರ್ಷಿಕ ಪರೀಕ್ಷೆ ಮುನ್ನಾ SSLC ವಿದ್ಯಾರ್ಥಿಗಳಿಗೆ ಶಾಕಿಂಗ್ ಸುದ್ದಿ!
ಸರ್ಕಾರದ ಜನಪ್ರಿಯ ಯೋಜನೆಯ ಹೆಸರು ಬದಲು.! ಹಾಗಾದ್ರೆ ಯಾವುದು ಗೊತ್ತಾ ಈ ಸ್ಕೀಮ್??