ಇಂದಿರಾ ಕ್ಯಾಂಟೀನ್‌ ಪ್ರಿಯರಿಗೆ ಗುಡ್ ನ್ಯೂಸ್, ಊಟದ ಹೊಸ ಮೆನು ಬಿಡುಗಡೆ, ಯಾವ ಎಲ್ಲ ತಿಂಡಿ ಸಿಗಲಿದೆ?

ನಮಸ್ಕಾರ ಕರ್ನಾಟಕ, ಬಡ ಜನತೆಗೆ ರುಚಿಕರ ಮತ್ತು ಅಚ್ಚುಕಟ್ಟಾದ ಆಹಾರವನ್ನು ಒದಗಿಸುವ ಇಂದಿರಾ ಕ್ಯಾಂಟೀನ್‌ಗೆ ಮತ್ತೊಂದು ಶುಭ ಸುದ್ದಿಯಾಗಿದೆ. ಇನ್ನುಮುಂದೆ, ಇಡ್ಲಿ ಮತ್ತು ಪಲಾವ್‌ ಮಾತ್ರವಲ್ಲ, ಹಲವು ವಿಭಿನ್ನ ತಿಂಡಿಗಳು ಲಭ್ಯವಾಗಲಿವೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಇತ್ತೀಚೆಗೆ ಈ ಬದಲಾವಣೆಗೆ ತೀರ್ಮಾನಿಸಿದೆ.

ಹೊಸ ಗುತ್ತಿಗೆದಾರರನ್ನು ಆಹ್ವಾನಿಸಲು ಮತ್ತು ಟೆಂಡರ್‌ಗಳನ್ನು ಕರೆಯಲು ಬಿಬಿಎಂಪಿ ಈಗಾಗಲೇ ಕ್ರಮ ಕೈಗೊಂಡಿದೆ. ಹೊಸ ಮೆನು ಜಾರಿಗೆ ಬರುವ ಸಮಯದಲ್ಲಿ ವಿವಿಧ ತಿಂಡಿಗಳು ಮತ್ತು ಊಟಗಳನ್ನು ಸಿದ್ಧಪಡಿಸುವ ಕುರಿತು ಸೂಚನೆಗಳನ್ನು ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ 192 ಇಂದಿರಾ ಕ್ಯಾಂಟೀನ್‌ಗಳಲ್ಲಿ, 142 ಕ್ಯಾಂಟೀನ್‌ಗಳಿಗೆ ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲಾಗಿದೆ. ಸ್ವಾತಂತ್ರ್ಯ ದಿನದ ವೇಳೆಗೆ, ಚಪಾತಿ ಮತ್ತು ರಾಗಿ ಮುದ್ದೆ ಸೇರಿ ಹೊಸ ಮೆನು ಜಾರಿಗೆ ಬರಲಿದೆ. ಮುಂದಿನ ವಾರದಿಂದ ಹೊಸ ಗುತ್ತಿಗೆದಾರರು ತಮ್ಮ ಸೇವೆಯನ್ನು ಪ್ರಾರಂಭಿಸಲಿದ್ದಾರೆ.

ಹೊಸ ಮೆನು:

ಉಪಾಹಾರ (ಬೆಳಿಗ್ಗೆ 7ರಿಂದ 10):

3 ಇಡ್ಲಿ, ಸಾಂಬಾರ್
ಪ್ರತಿದಿನ ಒಂದೊಂದು ಮಾದರಿಯ ರೈಸ್ ಬಾತ್ (ಚಟ್ನಿ, ಸಾಂಬಾರ್, ಖಾರಾ ಬೂಂದಿ, ಬಜ್ಜಿ, ಪಲಾವ್‌, ಬಿಸಿಬೇಳೆ ಬಾತ್, ಕಾರ ಬಾತ್, ಪೊಂಗಲ್)
ಭಾನುವಾರ: ಚೌ ಚೌ ಬಾತ್
ಬ್ರೆಡ್ ಜಾಮ್, ಮಂಗಳೂರು ಬನ್ಸ್, ಕಾಫಿ, ಟೀ
ಮಧ್ಯಾಹ್ನ ಮತ್ತು ರಾತ್ರಿ ಊಟ:

ರಾಗಿ ಮುದ್ದೆ, ಚಪಾತಿ ದಿನ ಬಿಟ್ಟು ದಿನ

ಅನ್ನ ಮತ್ತು ಸಾಂಬಾರು:

300 ಗ್ರಾಂ ಅನ್ನ, 150 ಗ್ರಾಂ ತರಕಾರಿ ಸಾಂಬಾರು
2 ರಾಗಿ ಮುದ್ದೆ, ಸೊಪ್ಪಿನ ಸಾರು, ಖೀರು
2 ಚಪಾತಿ, ಸಾಗು, ಖೀರು

ದಿನದ ಪ್ರಕಾರ ತಿಂಡಿಗಳು:

ಇಡ್ಲಿ (3/150 ಗ್ರಾಂ) – ಸಾಂಬಾರ್/ಚಟ್ನಿ
ಪಲಾವ್ (150 ಗ್ರಾಂ)
ಬಿಸಿಬೇಳೆ ಬಾತ್ (225 ಗ್ರಾಂ) – ಬೂಂದಿ
ಖಾರಾಬಾತ್ (225 ಗ್ರಾಂ) – ಚಟ್ನಿ
ಪೊಂಗಲ್ (225 ಗ್ರಾಂ) – ಚಟ್ನಿ
ಖಾರಾಬಾತ್ (150 ಗ್ರಾಂ)
ಕೇಸರಿಬಾತ್ (75 ಗ್ರಾಂ) – ಚಟ್ನಿ
ಬ್ರೆಡ್‌-ಜಾಮ್‌ (2 ಪೀಸ್)
ಮಂಗಳೂರು ಬನ್ಸ್‌ (1 ಪೀಸ್/40-50 ಗ್ರಾಂ)

ಮೇಲು ಹೇಳಿದ ಪ್ರಕಾರ, ಬೆಲೆಗಳು ಇಂತಿವೆ:

ಉಪಾಹಾರ (ಬೆಳಿಗ್ಗೆ 7ರಿಂದ 10): 5 ರೂ.
ಮಧ್ಯಾಹ್ನದ ಊಟ (ಮಧ್ಯಾಹ್ನ 1ರಿಂದ 3): 10 ರೂ.
ರಾತ್ರಿ ಊಟ (ಸಂಜೆ 7.30 ರಿಂದ)
ಇಂದಿರಾ ಕ್ಯಾಂಟೀನ್‌ ಯೋಜನೆಗೆ ಈ ಬದಲಾವಣೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉತ್ತಮ ಆಹಾರ ಸಿಗಲಿದ್ದು, ಅವರ ಜೀವನ ಮತ್ತಷ್ಟು ಸುಲಭವಾಗಲಿದೆ.

ಇತರೆ ವಿಷಯಗಳು :

ಪೋಸ್ಟ್ ಆಫೀಸ್‌ ಯೋಜನೆಯಲ್ಲಿ 1 ಲಕ್ಷ ಹೂಡಿಕೆ ಮಾಡಿ, ಈ ಯೋಜನೆಯಿಂದ ಡಬಲ್‌ ಬಡ್ಡಿ ಪಡೆಯಿರಿ.

ಕೇಂದ್ರ ಸರ್ಕಾರದಿಂದ ಸಿಗಲ್ಲಿದೆ ಉಚಿತ ಮನೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆಯಿರಿ.

ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

Leave a Reply

Your email address will not be published. Required fields are marked *

rtgh