ನಮಸ್ಕಾರ ಕರ್ನಾಟಕ, 2024ರ ಬಜೆಟ್ ನಂತರ ಚಿನ್ನದ ಬೆಲೆ ದೊಡ್ಡ ಕುಸಿತ ಕಂಡಿತ್ತು, ಆದರೆ ಈಗ ಮತ್ತೆ ಏರಿಕೆ ಕಾಣುತ್ತಿದೆ. ಕೆಲವು ದಿನಗಳಿಂದ ಸತತವಾಗಿ ಚಿನ್ನದ ಬೆಲೆ ಕುಸಿಯುತ್ತಾ ಬಂದಿದ್ದು, ಇಂದು ಆಕಸ್ಮಿಕವಾಗಿ ಏರಿಕೆಯನ್ನು ಕಂಡಿದೆ.
ಹಾಗಾದರೆ, ಇಂದು ಚಿನ್ನದ ಬೆಲೆ ಎಷ್ಟು? ಬೆಳ್ಳಿಯ ಬೆಲೆ ಎಷ್ಟು? ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
2024ರ ಆರಂಭದಲ್ಲಿ ಚಿನ್ನದ ಬೆಲೆ ಏರಿಕೆಯನ್ನು ಕಂಡಿದ್ದು, ಪ್ರತಿ 10 ಗ್ರಾಂಗೆ 1,00,000 ರೂ. ತಲುಪಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, 70,000 ರೂಪಾಯಿ ತಲುಪಿದ್ದ ಚಿನ್ನದ ಬೆಲೆ ದಿಢೀರ್ ಕುಸಿತವನ್ನು ಕಂಡು, ಈಗ ಮತ್ತೆ ಏರಿಕೆಯನ್ನು ಕಾಣುತ್ತಿದೆ.

ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 1,600 ರೂಪಾಯಿ ಏರಿಕೆ ಕಂಡು, ಈಗ 6,91,600 ರೂಪಾಯಿಯಾಗಿದೆ. ಇದು ಪ್ರತಿ 10 ಗ್ರಾಂಗೆ 69,160 ರೂಪಾಯಿಯಾಗಿದೆ.
ಆಭರಣ ಚಿನ್ನ, ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆಯೂ ಪ್ರತಿ 100 ಗ್ರಾಂಗೆ 1,500 ರೂಪಾಯಿ ಏರಿಕೆಯನ್ನು ಕಂಡು, ಪ್ರತಿ 10 ಗ್ರಾಂಗೆ 63,400 ರೂಪಾಯಿಯಾಗಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯು 250 ರೂಪಾಯಿ ಕುಸಿತ ಕಂಡು, 84,000 ರೂಪಾಯಿಗೆ ಮಾರಾಟವಾಗುತ್ತಿದೆ.
ಆಷಾಢ ಮುಗಿದು ಶ್ರಾವಣ ಆರಂಭವಾಗುತ್ತಿರುವುದರಿಂದ, ಚಿನ್ನದ ಬೆಲೆ ಮತ್ತಷ್ಟು ಏರಿಕೆಯನ್ನು ಕಾಣುವ ನಿರೀಕ್ಷೆ ಇದೆ.
ಇತರೆ ವಿಷಯಗಳು :
ಪೋಸ್ಟ್ ಆಫೀಸ್ ಯೋಜನೆಯಲ್ಲಿ 1 ಲಕ್ಷ ಹೂಡಿಕೆ ಮಾಡಿ, ಈ ಯೋಜನೆಯಿಂದ ಡಬಲ್ ಬಡ್ಡಿ ಪಡೆಯಿರಿ.
ಕೇಂದ್ರ ಸರ್ಕಾರದಿಂದ ಸಿಗಲ್ಲಿದೆ ಉಚಿತ ಮನೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆಯಿರಿ.
ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.