ಹಲೋ ಸ್ನೇಹಿತರೆ, ಸರ್ಕಾರ ವಿದ್ಯಾರ್ಥಿ ವರ್ಗಕ್ಕೆ ಸಿಹಿ ಸುದ್ದಿ ನೀಡಿದೆ. 2024-25 ನೇ ಶೈಕ್ಷಣಿಕ ಸಾಲಿನ NMMS ವಿದ್ಯಾರ್ಥಿವೇತನಕ್ಕಾಗಿ, ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿಗಳಿಗೆ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP) ತೆರೆಯಲಾಗಿದೆ. ಅರ್ಜಿ ಸಲ್ಲಿಸಲು ಅರ್ಹತೆ? ಅಗತ್ಯ ದಾಖಲಾತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ ತಪ್ಪದೇ ಕೊನೆವರೆಗೂ ಓದಿ.
ಅಗತ್ಯ ದಾಖಲೆಗಳು
ಆಧಾರ್ ಸಂಖ್ಯೆ ಇರುವ ವಿದ್ಯಾರ್ಥಿಗಳು OTR ಪಡೆಯಲು
- ಸಕ್ರಿಯವಾಗಿರುವ ಮೊಬೈಲ್ ಸಂಖ್ಯೆ.
- ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ.
- ಆಧಾರ್ ಕಾರ್ಡ್
ಆಧಾರ್ ಸಂಖ್ಯೆ ಇಲ್ಲದೇ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯವಿರುವ ದಾಖಲೆಗಳು
- ಸಕ್ರಿಯ ಮೊಬೈಲ್ ಸಂಖ್ಯೆ
- ಪೋಷಕರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ನಂಬರ್
- ವಿದ್ಯಾರ್ಥಿಯು ಆಧಾರ್ ಸಂಖ್ಯೆಗಾಗಿ ಸಲ್ಲಿಸಿದ ಅರ್ಜಿಯ EID ಸಂಖ್ಯೆ.
- ಪೋಷಕರ ಆಧಾರ್ ಸಂಖ್ಯೆ.
ಪೋಷಕರ ಆಧಾರ್ ಸಂಖ್ಯೆ ನೀಡಿದ್ದರೂ ಸಹ ಉಳಿದ ಎಲ್ಲಾ ಮಾಹಿತಿಗಳು ಹಾಗೂ ಭಾವಚಿತ್ರಗಳು ವಿದ್ಯಾರ್ಥಿಯದ್ದೇ ಆಗಿರಬೇಕು. ವಿದ್ಯಾರ್ಥಿ ವೇತನವನ್ನು ಪಡೆಯಲು, ಕಾಲ ಮಿತಿಯೊಳಗೆ ವಿದ್ಯಾರ್ಥಿಯು ತನ್ನ ಆಧಾರ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಸತಕ್ಕದ್ದು.
ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು, ಅನುಸರಿಸಬೇಕಾದ ಪ್ರಮುಖ ಅಂಶಗಳು :
- 2024-25ನೇ ಸಾಲಿನಲ್ಲಿ Fresh ಹಾಗೂ Renewal ಮಾಡುವ ವಿದ್ಯಾರ್ಥಿಗಳು NSP ವೆಬ್‌ಸೈಟ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು OTR(One Time Registration) ಕಡ್ಡಾಯವಾಗಿರುತ್ತದೆ.
- OTR ಪ್ರತಿ ವಿದ್ಯಾರ್ಥಿಗೂ ನೀಡಲಾಗುವ ಒಂದು ಅನನ್ಯ ಸಂಖ್ಯೆಯಾಗಿದ್ದು, ಇದು ವಿದ್ಯಾರ್ಥಿಯ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ NSPನಲ್ಲಿ ಅರ್ಜಿ ಸಲ್ಲಿಸಲು ಮಾತ್ರ ಅನ್ವಯವಾಗುತ್ತದೆ.
- NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ Renewal ಮಾಡಲು NSP ನಲ್ಲಿ ನೊಂದಾಯಿತ ಮೊಬೈಲ್ ಗೆ SMS ಮೂಲಕ ಕಳುಹಿಸಲಾಗುತ್ತಿದೆ.
- ಹೊಸ ವಿದ್ಯಾರ್ಥಿಗಳಿಗೆ SMS ಮೂಲಕ Reference ID ಅಥವಾ OTR ಸಂಖ್ಯೆಯನ್ನು ಕಳುಹಿಸಲಾಗುವುದಿಲ್ಲ. ಆದ್ದರಿಂದ NSP ನಲ್ಲಿ ಮೊದಲ ಸಲ ಅರ್ಜಿ ಸಲ್ಲಿಸುತ್ತಿರುವವರಿಗೆ National Scholarship Portal 2 Student Login ಲಭ್ಯವಿರುವ “Know your OTR” ಎಂಬ ಆಯ್ಕೆಯನ್ನು ಬಳಸುವುದರ ಮೂಲಕ OTR ಅಥವಾ ರೆಫೆರನ್ಸ್ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗುತ್ತದೆ.
- 2024-25 ನೇ ಸಾಲಿನಲ್ಲಿ NSP ಮೂಲಕ ಅರ್ಜಿ ಸಲ್ಲಿಸಲು Face Authentication ಕಡ್ಡಾಯವಾಗಿದ್ದು, ಆಧಾರ್ ನಲ್ಲಿರುವ ಮಾಹಿತಿಗಳನ್ನು ಸರಿಪಡಿಸುವುದರೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ update ಮಾಡಿಸಬೇಕಾಗುತ್ತದೆ.
ಇದನ್ನು ಓದಿ: ಕರ್ನಾಟಕದಲ್ಲಿ ಆಗಸ್ಟ್ 3ರವರೆಗೆ ಭಾರೀ ಮಳೆಯ ಮುನ್ಸೂಚನೆ, ಈ ಜಿಲ್ಲೆಗಳಿಗೆ ರೆಡ್-ಯೆಲ್ಲೋ ಅಲರ್ಟ್.
ಪ್ರಮುಖ ದಿನಾಂಕಗಳು
- ಅರ್ಜಿ ಪೋರ್ಟಲ್ ಆರಂಭ – 30-6-2024
- ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು/ನವೀಕರಿಸಲು ಕೊನೆಯ ದಿನಾಂಕ- 31-8-2024
- ಶಾಲಾ/ ಕಾಲೇಜು ಹಂತದಲ್ಲಿ INO ಗಳಿಂದ ಅರ್ಜಿ ಪರಿಶೀಲನೆಗೆ ಕೊನೆಯ ದಿನಾಂಕ- 15-9-2024
- ಜಿಲ್ಲಾ ಹಂತದಲ್ಲಿ DNO ಗಳಿಂದ ಅರ್ಜಿ ಪರಿಶೀಲನೆಗೆ ಅಂತಿಮ ದಿನಾಂಕ- 30-9-2024
ಇತರೆ ವಿಷಯಗಳು:
ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ, ಹೊಸದಾಗಿ ಮದುವೆಯಾದವರಿಗೆ ಸಿಗಲಿದೆ 2.50 ಲಕ್ಷ ರೂ.
ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್, ಉಚಿತ ಹೋಲಿಗೆ ತರಬೇತಿ ಮತ್ತು ಸಾಲ ಪಡೆಯಲು ಅರ್ಜಿ ಆಹ್ವಾನ