ಹಲೋ ಸ್ನೇಹಿತರೆ, ಸಣ್ಣ ಪ್ರಮಾಣದ ಅಂಗಡಿಗಳನ್ನು ಹೊಂದಿರುವ ವ್ಯಾಪಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಗ್ ಶಾಕ್ ನೀಡಲು ಮುಂದಾಗಿದೆ. ಈಗಾಗಲೇ ನಗರದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಅಂಗಡಿಗಳಿದ್ದು, ಸಿಗರೇಟ್, ಗುಟ್ಕಾ ಮಾರಾಟ ಅಂಗಡಿಗಳಿಗೆ ಪ್ರತ್ಯೇಕ ಲೈಸೆನ್ಸ್ ಜಾರಿ ಮಾಡಲು ಪಾಲಿಕೆ ಮುಂದಾಗಿದೆ.

ಇದರಿಂದ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳು ಪರವಾನಗಿ ಹೊಂದುವುದು ಕಡ್ಡಾಯವಾಗಲಿದ್ದು, ಪಾಲಿಕೆಯಿಂದ ಹೊಸ ರೂಲ್ಸ್ ಜಾರಿಗೆ ತರಲು ಈಗಾಗಲೇ ಭರದ ಸಿದ್ಧತೆ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಉಜ್ವಲಾ ಯೋಜನೆಗೆ ಮತ್ತೆ ಅರ್ಜಿ ಆಹ್ವಾನ! ಅವಕಾಶವಂಚಿತರು ಅಪ್ಲೇ ಮಾಡಬಹುದು
ಇದರಿಂದ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳು ಕಡ್ಡಾಯವಾಗಿ ಪರವಾನಗಿ ಪಡೆಯಬೇಕಾಗುತ್ತದೆ. ಬೀಡಿ, ಸಿಗರೇಟ್, ಗುಟ್ಕಾ ಮಾರಾಟ ಅಂಗಡಿಗಳು ತಂಬಾಕು ಮಾರಾಟಕ್ಕೆ ಲೈಸೆನ್ಸ್ ಪಡೆಯಬೇಕು, ಇದರ ಜೊತೆಗೆ ಬೇಕರಿ, ಚಿಲ್ಲರೆ ಅಂಗಡಿ, ಬೀಡ ಶಾಪ್, ಟೀ ಅಂಗಡಿ, ಪುಟ್ ಪಾತ್ ಅಂಗಡಿಗಳು ಸೇರಿದಂತೆ ಇನ್ನಿತರ ಸಣ್ಣಪುಟ್ಟ ಅಂಗಡಿಗಳು ಲೈಸೆನ್ಸ್ ಪಡೆಯೋದು ಕಡ್ಡಾಯವಾಗಲಿದೆ.
ಎಲ್ಲಾ ಸಣ್ಣ ಅಂಗಡಿಗಳು ವರ್ಷಕ್ಕೆ 500ರೂ ಹಣ ಪಾವತಿ ಮಾಡಿ ಲೈಸೆನ್ಸ್ ಪಡೆಯಬೇಕು, ಈಗಾಗಲೇ ನಗರದಲ್ಲಿ ಸುಮಾರು 60 ಸಾವಿರಕ್ಕೂ ಅಧಿಕ ಸಣ್ಣ ಪುಟ್ಟ ಅಂಗಡಿಗಳು ಸಿಗರೇಟ್, ಗುಟ್ಕ ಮಾರಾಟ ಮಾಡುತ್ತಿವೆ ಎಂದು ಮಾಹಿತಿ ತಿಳಿದಿದೆ. ಒಂದು ವೇಳೆ ಲೈಸೆನ್ಸ್ ಇಲ್ಲದೇ ಸಿಗರೇಟ್, ಗುಟ್ಕ ಮಾರಾಟ ಮಾಡಿದ್ರೆ ಮೊದಲ ಬಾರಿಗೆ ಸಿಕ್ಕಿಬಿದ್ದರೆ 5 ಸಾವಿರ ದಂಡ ವಿಧಿಸಲಾಗುತ್ತದೆ, ನಂತರ ಪ್ರತಿದಿನ 100 ರೂ ದಂಡ ವಿಧಿಸಲು ಬಿಬಿಎಂಪಿ ಯೋಜನೆಯನ್ನು ರೂಪಿಸಿದೆ. ಸೆಪ್ಟೆಂಬರ್ ಮೊದಲ ವಾರದಿಂದ ಈ ರೂಲ್ಸ್ ಜಾರಿಗೆ ತರಲು ಸಿದ್ಧತೆ ಮಾಡಿರುವುದಾಗಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಅವರು ಮಾಹಿತಿ ನೀಡಿದ್ದಾರೆ.
ಇತರೆ ವಿಷಯಗಳು:
18ನೇ ಕಂತಿನ ಹಣ ಬಿಡುಗಡೆಗೆ ಅಧಿಕೃತ ಘೊಷಣೆ!
ಗ್ಯಾರಂಟಿ ಯೋಜನೆಗೆ ಅನುದಾನ ಕಡಿತ! ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಪರಿಷ್ಕರಣೆ