ನಮಸ್ಕಾರ ಕರ್ನಾಟಕ, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಜಾರಿ ಮತ್ತು ರದ್ದು ಪಡಿಸುವ ಬಗ್ಗೆ ಹೊಸ ನಿರ್ಧಾರಗಳು ಹೊರಬಿದ್ದಿವೆ. ಬಿಪಿಎಲ್ ಕಾರ್ಡ್‌ಗಳನ್ನು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ನೀಡಲಾಗುತ್ತಿದ್ದು, ಈ ಕಾರ್ಡ್‌ಗಳ ಮೂಲಕ ವಿವಿಧ ಸರಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರಲ್ಲಿ ಪಡಿತರ ವಿತರಣೆಯಿಂದ ಹಿಡಿದು ಆರೋಗ್ಯ, ಶಿಕ್ಷಣ, ಹಾಗೂ ವಿವಿಧ ಸವಲತ್ತುಗಳನ್ನು ಹೊಂದುವ ಅವಕಾಶವಿದೆ.
ಆದರೆ, ಇದೀಗ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಸುಮಾರು 20 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಶೇಕಡಾ 80 ಜನರು ಬಿಪಿಎಲ್ ಕಾರ್ಡ್ ಹೊಂದಿದ್ದು, ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ, ಇಷ್ಟೊಂದು ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ವಾಸ ಮಾಡುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಅನರ್ಹ ಕಾರ್ಡ್‌ಗಳನ್ನು ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ.
ಸಮರ್ಪಕ ಪರಿಶೀಲನೆ ನಂತರ, ಕಳೆದ 6 ತಿಂಗಳಲ್ಲಿ ರೇಷನ್ ತೆಗೆದುಕೊಳ್ಳದ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಪಡಿಸಲಾಗುವುದು. ಇದರಿಂದ ಅನರ್ಹರಾಗಿರುವ ಕಾರ್ಡ್ ದಾರರು ಯಾವುದೇ ಸರಕಾರದ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ನಿಮ್ಮ ಬಿಪಿಎಲ್ ಕಾರ್ಡ್ ಚಾಲ್ತಿಯಲ್ಲಿದೆಯೇ ಎಂದು ಪರಿಶೀಲಿಸಲು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.kar.nic.in/ ಗೆ ಭೇಟಿ ನೀಡಿ. ವೆಬ್‌ಸೈಟ್‌ನ ಮುಖಪುಟದಲ್ಲಿ ‘ರದ್ದು ಅಥವಾ ವಜಾ’ ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮ್ಮ ವೈಯಕ್ತಿಕ ವಿವರಗಳನ್ನು ತುಂಬಿ, ನಿಮ್ಮ ಕಾರ್ಡ್ ಪ್ರಮಾಣಿಕತೆ ಪರಿಶೀಲಿಸಬಹುದು.
ಈ ಹೊಸ ನಿಯಮಗಳ ಜಾರಿಗೆ, ಅನರ್ಹರಾಗಿರುವ 20 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಪಡಿಸಲಾಗುವುದು. ಈ ಕಾರ್ಡ್‌ಗಳು ರದ್ದಾದರೆ, ಪಡಿತರ ಸಾಮಗ್ರಿಗಳ ಜೊತೆಗೆ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಸವಲತ್ತುಗಳಿಗೂ ವಂಚಿತರಾಗುವ ಸಾಧ್ಯತೆಯಿದೆ.
ಹೀಗಾಗಿ, ನಿಮ್ಮ ಬಿಪಿಎಲ್ ಕಾರ್ಡ್ ಸರಿಯಾದದ್ದೇ ಎಂದು ತಕ್ಷಣವೇ ಪರಿಶೀಲಿಸಿ.
ಇತರೆ ವಿಷಯಗಳು:
ಈ ಯೋಜನೆಯಡಿ 2.30 ಲಕ್ಷ ಕೋಟಿ ನೀಡಲು ಸಚಿವ ಸಂಪುಟದಿಂದ ಅನುಮೋದನೆ!
ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಡೈರೆಕ್ಟ್ ಲಿಂಕ್ ಇಂದೇ ಅರ್ಜಿ ಸಲ್ಲಿಸಿ.