ಮೋದಿ ಸರ್ಕಾರದಿಂದ ಮಹಿಳೆಯರಿಗೆ ಸಿಹಿ ಸುದ್ದಿ, ಉಚಿತ ಹೊಲಿಗೆ ಯಂತ್ರದ ಜೊತೆಗೆ ಸಿಗಲ್ಲಿದೆ 1 ಲಕ್ಷ ರೂ. ಸಾಲ.

ನಮಸ್ಕಾರ ಕರ್ನಾಟಕ, ಮೂರನೇ ಬಾರಿಗೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮುಂಚಿನ ಅನೇಕ ಯೋಜನೆಗಳನ್ನು ಮುಂದುವರಿಸುವಲ್ಲಿ ತೊಡಗಿದೆ. ಇದರಲ್ಲಿ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡುವ ಯೋಜನೆ ಸಹ ಸೇರಿದೆ.

ಅನೇಕ ಮಹಿಳೆಯರು ಈಗಾಗಲೇ ಈ ಯೋಜನೆಗಳಿಂದ ಲಾಭ ಪಡೆಯುತ್ತಿದ್ದಾರೆ. ಇಂದಿಗೂ, ಯಾವುದೇ ಮಹಿಳೆ ಅಥವಾ ಪುರುಷ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ:

ಈ ಯೋಜನೆಯಡಿಯಲ್ಲಿ, ಹೊಲಿಗೆ ಯಂತ್ರ ಖರೀದಿಸಲು 15,000 ರೂ.ಗಳ ನೆರವು ನೀಡಲಾಗುತ್ತದೆ. ಈ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೆ, ಒಂದು ವಾರದ ಡಿಜಿಟಲ್ ತರಬೇತಿ ಒದಗಿಸಲಾಗುತ್ತದೆ. ತರಬೇತಿ ಅವಧಿಯಲ್ಲಿ, ಪ್ರತಿದಿನ 500 ರೂಪಾಯಿಗಳ ಪಾವತಿಯನ್ನು ನೀಡಲಾಗುತ್ತದೆ.

ಹೊಲಿಗೆ ಯಂತ್ರವನ್ನು ಖರೀದಿಸಿದ ನಂತರ, ಕೇಂದ್ರ ಸರ್ಕಾರವು 1 ಲಕ್ಷ ರೂಪಾಯಿಗಳ ಸಾಲವನ್ನು ನೀಡುತ್ತದೆ. ಈ ಸಾಲವನ್ನು 18 ತಿಂಗಳಲ್ಲಿ ಮರುಪಾವತಿ ಮಾಡಬಹುದು. ಮೊದಲ ಸಾಲವನ್ನು ಮರುಪಾವತಿ ಮಾಡಿದ ನಂತರ, ನೀವು 2 ಲಕ್ಷದವರೆಗೆ ಸಾಲ ಪಡೆಯಬಹುದು, ಇದನ್ನು 30 ತಿಂಗಳಲ್ಲಿ ಪಾವತಿಸಬೇಕು.

ಯೋಜನೆಗೆ ಅರ್ಹತೆ:

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು. ಈಗಾಗಲೇ ಹೊಲಿಗೆ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಅಗತ್ಯವಿರುವ ದಾಖಲೆಗಳು:

ಆಧಾರ್ ಕಾರ್ಡ್
ವಿಳಾಸ ಪುರಾವೆ
ಗುರುತಿನ ಚೀಟಿ
ಜಾತಿ ಪ್ರಮಾಣಪತ್ರ
ಪಾಸ್ಪೋರ್ಟ್ ಗಾತ್ರದ ಫೋಟೋ
ಮೊಬೈಲ್ ಸಂಖ್ಯೆ
ಬ್ಯಾಂಕ್ ಪಾಸ್ಬುಕ್

ಅರ್ಜಿಯನ್ನು ಹೇಗೆ ಸಲ್ಲಿಸಬೇಕು:

pmvishwakarma.gov.in ಅಧಿಕೃತ ವೆಬ್ಸೈಟಿಗೆ ಹೋಗಿ.
ನೋಂದಾಯಿಸಿಕೊಳ್ಳಿ. ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡಿದುಕೊಳ್ಳಿ.

ಇತರೆ ವಿಷಯಗಳು:

ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್, ಈರುಳ್ಳಿ ಶೆಡ್ ನಿರ್ಮಿಸಲು ಸಿಗಲ್ಲಿದೆ 1.60 ಲಕ್ಷ ಹಣ ಸಹಾಯಧನ.

ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್‌ವೆಲ್‌, ರೈತರೇ ಇಂದೇ ಅರ್ಜಿ ಸಲ್ಲಿಸಿ.

Leave a Reply

Your email address will not be published. Required fields are marked *

rtgh