ನಮಸ್ಕಾರ ಕರ್ನಾಟಕ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ, ಉಚಿತ ಊಟ ಮತ್ತು ವಸತಿ ಸಹಿತ 30 ದಿನಗಳ ಉಚಿತ ಹೋಲಿಗೆ ತರಬೇತಿ (Free Tailoring Training) ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಅರ್ಜಿ ಸಲ್ಲಿಸಬಹುದಾದ ಅರ್ಹ ಅಭ್ಯರ್ಥಿಗಳು:
- ವಯೋಮಿತಿ: 18 ರಿಂದ 45 ವರ್ಷಗಳೊಳಗಿನವರು.
- ಕನ್ನಡ ಜ್ಞಾನ: ಕನ್ನಡ ಭಾಷೆ ಓದಲು ಮತ್ತು ಬರೆಯಲು ತಕ್ಕಮಟ್ಟಿಗೆ ಅರಿತುಕೊಂಡಿರಬೇಕು.
- ಸ್ವ-ಉದ್ಯೋಗ: ತರಬೇತಿ ಬಳಿಕ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿ ಇರುವವರು.
- ಗ್ರಾಮೀಣ ಭಾಗ: ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ.
ಹೋಲಿಗೆ ತರಬೇತಿ ವಿವರಗಳು:
ಈ 30 ದಿನಗಳ ಉಚಿತ ತರಬೇತಿಗೆ ಸಂಬಂಧಿಸಿದಂತೆ ಎಲ್ಲಾ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಉಚಿತವಾಗಿ ನೀಡಲಾಗುತ್ತದೆ. ತರಬೇತಿ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿ ನಡೆಯುತ್ತದೆ.
ಬ್ಯಾಂಕ್ ಸಾಲ ಸೌಲಭ್ಯ:
ಹೋಲಿಗೆ ತರಬೇತಿಗೆ ಹಾಜರಾಗುವವರಿಗೆ 30 ದಿನಗಳ ತರಬೇತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳಡಿ ಸ್ವ-ಉದ್ಯೋಗ ಆರಂಭಿಸಲು ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಸಾಲಕ್ಕಾಗಿ ಅಗತ್ಯ ದಾಖಲಾತಿಗಳನ್ನು ಹೇಗೆ ಸಿದ್ಧಪಡಿಸಬೇಕು ಮತ್ತು ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಮಾರ್ಗದರ್ಶನವನ್ನು ಕೂಡ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನೇರವಾಗಿ ತರಬೇತಿ ಪ್ರಾರಂಭವಾಗುವ ದಿನ ಹಾಜರಾಗಬಹುದು. ಅಥವಾ ಮೊದಲು ನೋಂದಣಿ ಮಾಡಿಸಲು ಈ ಮೊಬೈಲ್ ಸಂಖ್ಯೆಗಳನ್ನ ಸಂಪರ್ಕಿಸಿ: 9449860007, 9538281989, 9916783825, 888044612.
ಅರ್ಜಿಗೆ ಅಗತ್ಯ ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ.
- ಬ್ಯಾಂಕ್ ಪಾಸ್ ಬುಕ್.
- ರೇಷನ್ ಕಾರ್ಡ್.
- ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ.
ತರಬೇತಿ ದಿನಾಂಕ:
30 ದಿನಗಳ ಉಚಿತ ಹೋಲಿಗೆ ತರಬೇತಿ ದಿನಾಂಕ: 12 ಆಗಸ್ಟ್ 2024 ರಿಂದ 10 ಸೆಪ್ಟೆಂಬರ್ 2024.
ತರಬೇತಿ ಕೇಂದ್ರ:
ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ – 581343.
ಹೆಚ್ಚಿನ ಮಾಹಿತಿಗಾಗಿ:
9449860007, 9538281989, 9916783825, 888044612.
ಆಹ್ವಾನ:
ಉಚಿತ ತರಬೇತಿಯು ನಿಮ್ಮ ಸ್ವ-ಉದ್ಯೋಗದ ಕನಸನ್ನು ಸಾಕಾರಗೊಳಿಸಲು ಒಳ್ಳೆಯ ಅವಕಾಶವಾಗಿದೆ. ಈ ತರಬೇತಿಯ ಪ್ರಯೋಜನವನ್ನು ಪಡೆದು ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ.