ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹವಾಮಾನ ಇಲಾಖೆ ತಜ್ಞರಾದ ಸಿ.ಎಸ್. ಪಾಟೀಲ್ ಅವರ ಪ್ರಕಾರ, ಆಗಸ್ಟ್ 3ರವರೆಗೆ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ. ಇದರೊಂದಿಗೆ, ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿಯೂ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳು, ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ, ಆಗಸ್ಟ್ 3ರವರೆಗೆ ವ್ಯಾಪಕ ಮಳೆಯ ಅನುಭವಿಸುತ್ತವೆ. ಇಲ್ಲಿ, ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ, ಆ.1ರಂದು ಆರೆಂಜ್ ಅಲರ್ಟ್, ಮತ್ತು ಆ.2 ಮತ್ತು 3ರಂದು ಯೆಲ್ಲೋ ಅಲರ್ಟ್ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 31 ಮತ್ತು ಆ.1ರಂದು ಆರೆಂಜ್ ಅಲರ್ಟ್ ಹಾಗೂ ಆ.2 ಮತ್ತು 3ರಂದು ಯೆಲ್ಲೋ ಅಲರ್ಟ್ ಇದೆ.
ಶಿವಮೊಗ್ಗ, ಕೊಡಗು, ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್, ಆ.1ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಜು.30, 31 ಮತ್ತು ಆ.1, 2ರಂದು ಯೆಲ್ಲೋ ಅಲರ್ಟ್ ಇದೆ.
ಕರ್ನಾಟಕ ರಾಜ್ಯಾದ್ಯಂತ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಬೆಂಗಳೂರಿನಲ್ಲಿ ಹಗುರವಾದ ಮಳೆಯ ಸಾಧ್ಯತೆ ಇದೆ. ಈ ಮಳೆಯ ಅವಧಿ ಇಂದಿನಿಂದ ಆಗಸ್ಟ್ 3ರವರೆಗೆ ಇರಲಿದೆ ಎಂದು ಹವಾಮಾನ ತಜ್ಞರಾದ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಇತರೆ ವಿಷಯಗಳು :
ಪೋಸ್ಟ್ ಆಫೀಸ್ ಯೋಜನೆಯಲ್ಲಿ 1 ಲಕ್ಷ ಹೂಡಿಕೆ ಮಾಡಿ, ಈ ಯೋಜನೆಯಿಂದ ಡಬಲ್ ಬಡ್ಡಿ ಪಡೆಯಿರಿ.
ಕೇಂದ್ರ ಸರ್ಕಾರದಿಂದ ಸಿಗಲ್ಲಿದೆ ಉಚಿತ ಮನೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆಯಿರಿ.
ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.