ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ 3.0 ಅವಧಿಯ ಮೊದಲ ಬಜೆಟ್ 23 ಜುಲೈ 2024ರಂದು ಮಂಡಿಸಲಿದ್ದಾರೆ. ಇದೇ ವೇಳೆ ಬಜೆಟ್’ನಲ್ಲಿ ರೈತರಿಗೆ ಭರ್ಜರಿ ಗಿಫ್ಟ್ ಸಿಗಲಿದೆ ಎಂಬ ಸುದ್ದಿಯೂ ಇದೆ. ಕೇಂದ್ರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಬಜೆಟ್ ಹಂಚಿಕೆಯನ್ನ ಶೇಕಡಾ 3 ರಿಂದ ಸುಮಾರು 80,000 ಕೋಟಿಗೆ ಹೆಚ್ಚಿಸಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಮಧ್ಯಂತರ ಬಜೆಟ್’ನಲ್ಲಿ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 60,000 ಕೋಟಿ ರೂ. ಇದರಲ್ಲಿ ಪ್ರತಿ ರೈತರಿಗೆ ವಾರ್ಷಿಕ 6,000 ರೂಪಾಯಿ ನೆರವು ನೀಡಲಾಗುತ್ತದೆ. ಈ ಮೊತ್ತವನ್ನೂ ತಲಾ 2000ದಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ.
ಜೂನ್ ಕೊನೆಯ ವಾರದಲ್ಲಿ ನಡೆದ ಬಜೆಟ್ ಪೂರ್ವ ಸಮಾಲೋಚನಾ ಸಭೆಗಳಲ್ಲಿ ಕೃಷಿ ಪ್ರತಿನಿಧಿಗಳು, ಮೊತ್ತ ಹೆಚ್ಚಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬೇಡಿಕೆಗಳನ್ನ ಸಲ್ಲಿಸಿದರು. ಆ ನಂತರ ರೈತನಿಗೆ ನೀಡುವ ಈ ಮೊತ್ತವನ್ನ 8,000 ವರೆಗೆ ಹೆಚ್ಚಿಸಬಹುದು ಎಂದು ಹೇಳಲಾಗ್ತಿದೆ.
ಪ್ರತಿ ಕಂತಿಗೆ 8000 ರೂಪಾಯಿ ಪಾವತಿಸಲು ಮನವಿ: ಪೂರ್ಣ ಬಜೆಟ್ ನಲ್ಲಿ ಯುವಜನತೆ, ಮಹಿಳೆಯರು, ಗ್ರಾಮೀಣ ಪ್ರದೇಶ ಹಾಗೂ ರೈತರ ಕಡೆ ಗಮನ ಹರಿಸಲಾಗುವುದು ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ. ವರದಿಯ ಪ್ರಕಾರ, ಕಿಸಾನ್ ಯೂನಿಯನ್‌ನ ಬದ್ರಿ ನಾರಾಯಣ ಚೌಧರಿ ಅವರು ಪಿಎಂ ಕಿಸಾನ್ ಅಡಿಯಲ್ಲಿ ಹಂಚಿಕೆಯನ್ನ 6,000 ರೂ.ಗಳಿಂದ 8,000 ರೂ.ಗೆ ಹೆಚ್ಚಿಸುವಂತೆ ನಾವು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಹೀಗಾಗಿ ಮುಂದಿನ ಬಜೆಟ್’ನಲ್ಲಿ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ವರ್ಷಕ್ಕೆ 8 ಸಾವಿರ ರೂಪಾಯಿ ಹೆಚ್ಚಿಸಲಾಗುವುದು ಎನ್ನಲಾಗ್ತಿದೆ.
ಮಧ್ಯಂತರ ಬಜೆಟ್’ನ್ನ ಫೆಬ್ರವರಿ 1, 2024 ರಂದು ಮಂಡಿಸಲಾಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕತೆಯಲ್ಲಿ ಆದಾಯ ಮತ್ತು ವೆಚ್ಚಗಳ ಹೆಚ್ಚಳದಿಂದಾಗಿ FY 25 ಕ್ಕೆ ಹೆಚ್ಚಿನ ನೇರ ಮತ್ತು ಪರೋಕ್ಷ ತೆರಿಗೆಗಳನ್ನ ಭವಿಷ್ಯ ನುಡಿದಿದ್ದಾರೆ.
2025 ರ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಮೂಲಕ 21.99 ಲಕ್ಷ ಕೋಟಿ ಮತ್ತು ಪರೋಕ್ಷ ತೆರಿಗೆ ಮೂಲಕ 16.31 ಲಕ್ಷ ಕೋಟಿ ಸಂಗ್ರಹಿಸಲು ಕೇಂದ್ರ ಯೋಜಿಸಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಇತರೆ ವಿಷಯಗಳು :
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, 7ನೇ ರಾಜ್ಯ ವೇತನ ಆಯೋಗ ಜಾರಿಯಾದ್ರೆ ವೇತನ ಎಷ್ಟು ಹೆಚ್ಚಾಗಲಿದೆ?