ಈ ಹಳೆಯ ವಸ್ತುಗಳು ನಿಮ್ಮ ಬಳಿ ಇದ್ರೆ ಗುಡ್‌ ನ್ಯೂಸ್!‌ ಕನಿಷ್ಠ ಬೆಲೆಯಲ್ಲಿ ಖರೀದಿಗೆ ಆದೇಶ

ಹಲೋ ಸ್ನೇಹಿತರೆ, ಮನೆಯಲ್ಲಿ ಇರುವ ಹಳೆಯ ಟಿವಿ, ಕಂಪ್ಯೂಟರ್, ಮೊಬೈಲ್ ಹಾಗೂ ಚಾರ್ಜರ್ಗಳನ್ನು ಇತ್ಯಾದಿ ವಸ್ತುಗಳನ್ನು ಮಾರಾಟಗಾರರು ಗ್ರಾಹಕರಿಗೆ ಕನಿಷ್ಠ ಬೆಲೆಯನ್ನು ನೀಡಿ ಖರೀದಿಸಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

Minimum price For older items

ಪ್ರಸ್ತುತ ದಿನದಿಂದ ದಿನಕ್ಕೆ ಮನೆಗಳಲ್ಲಿ ಅಪಾಯಕಾರಿಯಾದ ಇ-ತ್ಯಾಜ್ಯ ಹೆಚ್ಚಳ ಆಗುತ್ತಿರುವುದು ಮತ್ತು ಗುಜರಿ ಅಂಗಡಿಗಳಲ್ಲಿ ವಿದ್ಯುನ್ಮಾನ ಉಪಕರಣಗಳಿಂದ ಆಯ್ದ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಉಳಿದ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಇದನ್ನು ಓದಿ: ಸರ್ಕಾರದ ಜನಪ್ರಿಯ ಯೋಜನೆಯ ಹೆಸರು ಬದಲು.! ಹಾಗಾದ್ರೆ ಯಾವುದು ಗೊತ್ತಾ ಈ ಸ್ಕೀಮ್??

ಸಾರ್ವಜನಿಕರ ಮತ್ತು ಸಮುದಾಯದ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಇ-ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೊಸ ಟಿವಿ, ಕಂಪ್ಯೂಟರ್, ಮೊಬೈಲ್ ಇತ್ಯಾದಿ ಯಾವುದೇ ವಿಧ್ಯುನ್ಮಾನ ಉಪಕರಣ ಖರೀದಿಸುವ ಸಂದರ್ಭದಲ್ಲಿ ಗ್ರಾಹಕರು ಇಷ್ಟಪಟ್ಟಲ್ಲಿ, ಅವರ ಹಳೆಯ ಟಿವಿ, ಕಂಪ್ಯೂಟರ್, ಮೊಬೈಲ್ ಮತ್ತು ಚಾರ್ಜರ್ ಇತ್ಯಾದಿಯನ್ನು ಕಡ್ಡಾಯವಾಗಿ ಮಾರಾಟಗಾರರು ಕನಿಷ್ಠ ಬೆಲೆ ನೀಡಿ ಮರು ಖರೀದಿ ಮಾಡಬೇಕು ಎಂಬ ನಿಯಮ ಜಾರಿಗೆ ತಂದರೆ, ಇ-ತ್ಯಾಜ್ಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.

ಈ ಕಾರಣಕ್ಕಾಗಿ ಕಂಪ್ಯೂಟರ್ ಮೊಬೈಲ್‌ ಗಳ ದತ್ತಾಂಶಗಳು ದುರ್ಬಳಕೆ ಆಗದ ರೀತಿಯಲ್ಲಿ ಹಳೆಯ ವಿದ್ಯುನ್ಮಾನ ಸಲಕರಣೆಗಳ ಮರು ಖರೀದಿಯ ಸಾಧಕ-ಬಾಧಕ ಮತ್ತು ಅನುಷ್ಠಾನದ ಕುರಿತಂತೆ ಪ್ರಸ್ತಾವನೆಯನ್ನು 30 ದಿನಗಳ ಒಳಗಾಗಿ ಸಲ್ಲಿಸಲು ಸರ್ಕಾರ ಸೂಚಿಸಿದೆ.

ಇತರೆ ವಿಷಯಗಳು:

ಆಧಾರ್‌ಗೆ ಇನ್ನೂ 4 ದಿನ ಗಡುವು! ತಕ್ಷಣ ಹೀಗೆ ಮಾಡಿ

ಮಧ್ಯವಾರ್ಷಿಕ ಪರೀಕ್ಷೆ ಮುನ್ನಾ SSLC ವಿದ್ಯಾರ್ಥಿಗಳಿಗೆ ಶಾಕಿಂಗ್‌ ಸುದ್ದಿ!

Leave a Reply

Your email address will not be published. Required fields are marked *

rtgh