ನಮಸ್ಕಾರ ಕರ್ನಾಟಕ, ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಪಿಎಮ್ ಉಷಾ ವಿದ್ಯಾರ್ಥಿವೇತನ (ಶಿಕ್ಷಣ ಸ್ಕಾಲರ್ಶಿಪ್) ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಿ ಸ್ಕಾಲರ್ಶಿಪ್ ಪಡೆಯಬಹುದು.
ಪಿಎಮ್ ಉಷಾ ಸ್ಕಾಲರ್ಶಿಪ್ ಯೋಜನೆಯ ಮೂಲಕ ಪಿಯುಸಿ ಪಾಸಾದ ಮತ್ತು ಡಿಗ್ರಿ ಓದಲು ಬಯಸುವ ವಿದ್ಯಾರ್ಥಿಗಳಿಗೆ 3 ವರ್ಷಗಳ ಕಾಲ ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಈ ಯೋಜನೆಯಡಿ 20 ಸಾವಿರದವರೆಗೂ ಸ್ಕಾಲರ್ಶಿಪ್ ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವಾಗುತ್ತದೆ.
ಅರ್ಹತೆಯ ಮಾನದಂಡಗಳು:
ವಿದ್ಯಾರ್ಥಿ 2024ನೇ ಸಾಲಿನಲ್ಲಿ ಪಿಯುಸಿ ಪಾಸ್ ಆಗಿರಬೇಕು.
ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ 80% ಅಥವಾ ಹೆಚ್ಚು ಅಂಕಗಳನ್ನು ಪಡೆದಿರಬೇಕು.
3 ವರ್ಷಗಳ ಡಿಗ್ರಿ ಕೋರ್ಸ್ಗೆ ದಾಖಲಾಗಿರಬೇಕು.
ಅರ್ಹರಾದ ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಶಿಪ್:
ಮೊದಲ ವರ್ಷದ ಡಿಗ್ರಿ ಅಡ್ಮಿಷನ್ ಗಾಗಿ ₹12,000
2ನೇ ಮತ್ತು 3ನೇ ವರ್ಷಗಳ ಅಡ್ಮಿಷನ್ ಗಾಗಿ ತಲಾ ₹20,000
ಅರ್ಜಿಗೆ ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್
ಫೋನ್ ನಂಬರ್
10ನೇ ಹಾಗೂ 12ನೇ ತರಗತಿಯಲ್ಲಿ ಪಾಸ್ ಆದ ಮಾರ್ಕ್ಸ್ ಕಾರ್ಡ್
ಡಿಗ್ರಿಗೆ ಅಡ್ಮಿಷನ್ ದಾಖಲೆಗಳು
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ:
2024ರ ಅಕ್ಟೋಬರ್ ತಿಂಗಳ ಕೊನೆಯ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್ಲೈನ್ ನಲ್ಲಿ ನಡೆಯಲಿದ್ದು, https://scholarships.gov.in/ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 080-23311330 ಈ ನಂಬರ್ಗೆ ಕರೆ ಮಾಡಬಹುದು.
ಇತರೆ ವಿಷಯಗಳು:
ವರಮಹಾಲಕ್ಷ್ಮಿ ಹಬ್ಬದೊಳಗೆ ಮಹಿಳೆಯರ ಖಾತೆಗೆ ₹2,000!
ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್, ಈರುಳ್ಳಿ ಶೆಡ್ ನಿರ್ಮಿಸಲು ಸಿಗಲ್ಲಿದೆ 1.60 ಲಕ್ಷ ಹಣ ಸಹಾಯಧನ.