ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ ಜಾರಿ, ರಾಜ್ಯದ ಯುವಕರಿಗೆ ವಿದೇಶದಲ್ಲಿ ಉದ್ಯೋಗ.

ಕರ್ನಾಟಕ ರಾಜ್ಯದ ಬಡ ಯುವಕರಿಗೆ ವಿದೇಶದಲ್ಲಿ ಉದ್ಯೋಗಕ್ಕಾಗಿ ರಾಜ್ಯ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಯುವಕರು ಯೂರೋಪ್, ಹಂಗೇರಿ ಸೇರಿದಂತೆ ವಿವಿಧ ದೇಶಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ.

ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಗ್ರಂಥಾಲಯ ಇಲಾಖೆ ಆಯುಕ್ತರಾದ ಎಂ. ಕನಗವಲ್ಲಿ ಹೇಳಿದರು.

ಚಿತ್ರದುರ್ಗದ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಕಚೇರಿ ಹಾಗೂ ನಗರದ ಕೇಂದ್ರ ಗ್ರಂಥಾಲಯಕ್ಕೆ ಶುಕ್ರವಾರದಂದು ಭೇಟಿ ನೀಡಿದ ನಂತರ ಅವರು ಈ ವಿಷಯವನ್ನು ತಿಳಿಸಿದರು.

ಈ ಯೋಜನೆಯು ಕೇವಲ ಕಳೆದೆರಡು ತಿಂಗಳ ಅವಧಿಯಲ್ಲಿ 150 ಕ್ಕೂ ಹೆಚ್ಚು ಯುವಜನರನ್ನು ಸ್ಲೋವಾಕಿಯಾ, ಹಂಗೇರಿ ಮುಂತಾದ ದೇಶಗಳಿಗೆ ಉದ್ಯೋಗಕ್ಕೆ ಕಳುಹಿಸಿದ್ದು, ಈ ಸಂಬಂಧ ನಿಗಮದಿಂದಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ. ಐಟಿಐ, ಡಿಪ್ಲೋಮಾ ಮುಂತಾದ ವೃತ್ತಿಪರ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ಯುವಕರಿಗೆ ವಿದೇಶದಲ್ಲಿ ಉದ್ಯೋಗಾವಕಾಶವನ್ನು ಒದಗಿಸಲು ಈ ಯೋಜನೆವು ನೆರವಾಗುತ್ತಿದೆ.

ವೃತ್ತಿಪರ ತರಬೇತಿಯ ನಂತರ, ರಾಜ್ಯದ ಸುಮಾರು 1000 ಕ್ಕೂ ಹೆಚ್ಚು ಯುವಜನರು ವಿದೇಶಗಳಿಗೆ ಕಳುಹಿಸಲ್ಪಟ್ಟಿದ್ದು, ಸ್ಥಳೀಯವಾಗಿ ಉತ್ತಮ ಕೌಶಲ್ಯ ತರಬೇತಿ ನೀಡಲಾಗಿದೆ. ನಿಗಮವು ಬಿಡದಿಯ ಟೊಯೋಟಾ ಮತ್ತು ಕಿರ್ಲೋಸ್ಕರ್ ನಲ್ಲಿ ತರಬೇತಿ ಕೊಡಿಸುತ್ತಿದ್ದು, ಪ್ರತಿ ಅಭ್ಯರ್ಥಿಗೆ ತರಬೇತಿಗಾಗಿ 35 ಸಾವಿರ ರೂ.ಗಳ ವೆಚ್ಚವನ್ನು ಭರಿಸುತ್ತಿದೆ.

ಸ್ಲೋವಾಕಿಯಾ ದೇಶದಲ್ಲಿ ಐಟಿಐ, ಡಿಪ್ಲೋಮಾ ಪದವೀಧರರಿಗೆ ಉದ್ಯೋಗವಕಾಶ ಕಲ್ಪಿಸಲಾಗಿದ್ದು, ಜೂನ್ 5 ರಿಂದ ಈವರೆಗೆ ಹಲವು ತಂಡಗಳಲ್ಲಿ ಕಳುಹಿಸಲಾಗಿದೆ. ತಿಂಗಳಿಗೆ 970 ಯೂರೋ (ಸుమಾರು 86 ಸಾವಿರ ರೂಪಾಯಿ) ವೇತನ ನೀಡಲಾಗುತ್ತಿದೆ.

ಚಿತ್ರದುರ್ಗ ಜಿಲ್ಲೆಯ ಆಟೋಮೊಬೈಲ್ ಡಿಪ್ಲೋಮಾ ಪದವೀಧರ ಮೆಹ್ತಾಬ್ ಎಸ್ ಹೆಬ್ಬಳ್ಳಿ ಈ ಯೋಜನೆಯಿಂದ ಸ್ಲೋವಾಕಿಯಾ ದೇಶಕ್ಕೆ ತೆರಳಿದ್ದು, ಇತ್ತೀಚೆಗೆ 37 ಚಾಲಕರನ್ನು ಹಂಗೇರಿಗೆ ಕಳುಹಿಸಲಾಗಿದೆ.

ವೀಸಾ, ದಾಖಲೆ ಪರಿಶೀಲನೆ ಮುಂತಾದ ಕೆಲಸಗಳಿಗೆ ನಿಗಮವೇ ಒತ್ತಾಸೆಯಾಗಿದ್ದು, ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ, ಜಪಾನ್, ಫಿನ್ಲ್ಯಾಂಡ್, ಜರ್ಮನಿ ಮುಂತಾದ ದೇಶಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಯೋಜನೆ ರೂಪಿಸಿದೆ ಎಂದು ಎಂ. ಕನಗವಲ್ಲಿ ಹೇಳಿದರು.

ಚಿತ್ರದುರ್ಗದ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ ಇಲಾಖಾ ಆಯುಕ್ತರಾದ ಎಂ. ಕನಗವಲ್ಲಿ, ಗ್ರಂಥಾಲಯದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಓದುಗರಿಗೆ ಉತ್ತಮ ವಾತಾವರಣ ನಿರ್ಮಿಸಲು ಸೂಚಿಸಿದರು.

ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದುಗರ ಆಸಕ್ತಿ ಹೆಚ್ಚಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಪುಸ್ತಕಗಳನ್ನು ಲಭ್ಯವಿರಿಸಬೇಕು ಎಂದು ಅವರು ತಿಳಿಸಿದರು.

ಈ ಮೊದಲು, ಬಿದರೆಕೆರೆ ಬಳಿಯ ಕೌಶಲ್ಯಾಭಿವೃದ್ಧಿ ಇಲಾಖೆಗೆ ಸೇರಿದ 45.13 ಎಕರೆ ಭೂಮಿಗೆ 1.98 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಾಂಪೌಂಡ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಟಿ. ವೇಮಣ್ಣ, ಗ್ರಂಥಾಲಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇತರೆ ವಿಷಯಗಳು:

ಆಭರಣ ಪ್ರಿಯರಿಗೆ ಬಿಗ್ ಶಾಕ್, ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ

ಕೊನೆಗೂ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3 ರಷ್ಟು ಏರಿಕೆ ಮಾಡಿದ ಸರ್ಕಾರ.!

Leave a Reply

Your email address will not be published. Required fields are marked *

rtgh