ಹಲೋ ಸ್ನೇಹಿತರೆ, ರಾಜ್ಯ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯಡಿ ಕುಟುಂಬದಲ್ಲಿ ಒಬ್ಬರಿಗೆ ನಾಲ್ಕು ಚಕ್ರದ ವಾಹನವನ್ನು ಖರೀದಿಸಲು ಸರ್ಕಾರವು ಸಬ್ಸಿಡಿ ನೀಡುವುದರ ಮೂಲಕ ಆರ್ಥಿಕ ಸಹಾಯವನ್ನು ನೀಡುತ್ತಿದೆ. ಈ ಯೋಜನೆ ಅಡಿಯಲ್ಲಿ 3 ಲಕ್ಷ ಸಬ್ಸಿಡಿಯನ್ನು ಪಡೆಯುವ ಮೂಲಕ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು.
ಅಷ್ಟೇ ಅಲ್ಲದೆ ಈ ಯೋಜನೆಗೆ ಯಾವುದೇ ಕೆಳವರ್ಗ ಮತ್ತು ಬಡ ರೇಖೆಗಿಂತ ಕೆಳಗಿರುವ ಕುಟುಂಬಸ್ಥರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಇದನ್ನು ಓದಿ: ರಾಜ್ಯದ ರೈತರಿಗೆ ಕೃಷಿ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ!
ಯೋಜನೆಗೆ ಸಬ್ಸಿಡಿ ಪಡೆಯಲು ಬೇಕಾಗುವ ಅರ್ಹತೆಗಳು.?
- ಅರ್ಜಿ ಸಲ್ಲಿಸುವ ಅರ್ಜಿದಾರನ ವಯಸ್ಸು ಕನಿಷ್ಠ 21ರಿಂದ 45 ವರ್ಷದೊಳಗಿನ ನಿರುದ್ಯೋಗಿ ಆಗಿರಬೇಕು.
- ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಮೇಲ್ಪಟ್ಟಿರಬಾರದು,.
- ಡ್ರೈವಿಂಗ್ ಲೈಸೆನ್ಸ್ ನನ್ನು ಹೊಂದಿರಬೇಕು.
- ಆ ಕುಟುಂಬದ ಯಾವುದೇ ಸದಸ್ಯರು ಸರಕಾರಿ ಉದ್ಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರಬಾರದು.
- ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸುವವರು ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಹಿಂದುಳಿದ ವರ್ಗದವರಾಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.?
- ಆಧಾರ್ ಕಾರ್ಡ್
- ಆದಾಯ ದೃಡೀಕರಣ ಪತ್ರ / ಜಾತಿ ದೃಢೀಕರಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಫೋಟೋ
- (DL) ಡ್ರೈವಿಂಗ್ ಲೈಸೆನ್ಸ್
- ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳಾದ ಆಗಸ್ಟ್ 30 2024 ಆಗಿರುತ್ತದೆ.
ಎಲ್ಲಾ ಮುಖ್ಯ ದಾಖಲೆಗಳನ್ನು ಇಟ್ಟುಕೊಂಡು ನಿಮ್ಮ ಹತ್ತಿರದ ಗ್ರಾಮ ಓನ್/ ಕರ್ನಾಟಕ ಓನ್/ ಬೆಂಗಳೂರು ಓನ್ ನಾಗರಿಕ ಸೇವಾ ಕೇಂದ್ರಗಳಲ್ಲಿ, ಈ ಯೋಜನೆಗೆ ನಿಮ್ಮ ದಾಖಲೆಗಳನ್ನು ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇತರೆ ವಿಷಯಗಳು:
ಪಡಿತರ ಚೀಟಿದಾರರೇ ಕೂಡಲೇ ಈ ಕೆಲಸ ಮಾಡಿ: ಇಲ್ಲಾಂದ್ರೆ ರೇಷನ್ ಸಿಗಲ್ಲಾ!
ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ.