ಟ್ರಾಕ್ಟರ್, ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಖರೀದಿಗೆ ಸಹಾಯಧನ! ಈ ರೈತರಿಗೆ ಮಾತ್ರ ಅವಕಾಶ

ಹಲೋ ಸ್ನೇಹಿತರೆ, ರಾಜ್ಯದಲ್ಲಿನ ತೋಟಗಾರಿಕೆ ಇಲಾಖೆಯು 2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನಿಸಿದೆ.

Subsidy in Horticulture Department

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವ ರೈತರಿಗೆ ಹನಿ ನೀರಾವರಿ ಅಳವಡಿಸಿದ ಪ್ರತಿ ಫಲಾನುಭವಿಗೆ ಮೊದಲ 2 ಹೆ. ಪ್ರದೇಶದವರೆಗೆ ಶೇ. 90% ಮತ್ತು 3 ಹೆ. ಪ್ರದೇಶಕ್ಕೆ ಶೇ. 45% ರಷ್ಟು ಸಹಾಯಧನ ಸೌಲಭ್ಯ ಲಭ್ಯವಿರುತ್ತದೆ. ಕೃಷಿ ಇಲಾಖೆಯಿಂದ ಅನುಮೋದಿತ ಕಂಪನಿಗಳ ಮೂಲಕವೇ ರೈತರು ಸೂಕ್ಷ್ಮ ನೀರಾವರಿ ಘಟಕವನ್ನು ಅಳವಡಿಸಿಕೊಳ್ಳುವುದು. ಆಸಕ್ತ ರೈತರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಹಾಗೂ ತೋಟಗಾರಿಕೆ ಇಲಾಖೆ, ಶಿಕಾರಿಪುರ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆಯುವುದು.

ಇದನ್ನು ಓದಿ: ಸರ್ಕಾರದ ಜನಪ್ರಿಯ ಯೋಜನೆಯ ಹೆಸರು ಬದಲು.! ಹಾಗಾದ್ರೆ ಯಾವುದು ಗೊತ್ತಾ ಈ ಸ್ಕೀಮ್??

2024-25ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಪರಿಶಿಷ್ಟ ಜಾತಿ ರೈತರಿಗೆ ಟ್ರಾಕ್ಟರ್ ಖರೀದಿಸಲು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತ ರೈತರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಹಾಗೂ 2024-25ನೇ ಸಾಲಿನ ಎಸ್.ಎಂ.ಎ.ಎಂ. ಯೋಜನೆಯಡಿ ಅಡಿಕೆ ಸುಲಿಯುವ ಯಂತ್ರ ಹಾಗೂ ಅಡಿಕೆ ದೋಟಿಗಳಿಗೆ ಸಹಾಯಧನ ನೀಡುಲಾಗುವುದು. ಆಸಕ್ತ ರೈತರು ಆಯಾ ಹೋಬಳಿ ರೈತರ ಸಂಪರ್ಕ ಸಹಾಯಕ ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರನ್ನು ನೋಂದಣಿ ಮಾಡಿಸಬಹುದು. ಈ ಎಲ್ಲಾ ಯೋಜನೆಗಳಿಗೆ ಸೆ. 23 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಎಲ್ಲಾ ರೈತರಿಗೆ ಸೂಚನೆ ನೀಡಲಾಗಿದೆ.

ಇತರೆ ವಿಷಯಗಳು:

ಮಧ್ಯವಾರ್ಷಿಕ ಪರೀಕ್ಷೆ ಮುನ್ನಾ SSLC ವಿದ್ಯಾರ್ಥಿಗಳಿಗೆ ಶಾಕಿಂಗ್‌ ಸುದ್ದಿ!

ಪಡಿತರ ಚೀಟಿದಾರರಿಗೆ 10 ಲಕ್ಷ ನೀಡುತ್ತಿದ್ದು! ಜಸ್ಟ್ ಈ ಕೆಲಸ ಮಾಡಿದ್ರೆ ಸಾಕು

Leave a Reply

Your email address will not be published. Required fields are marked *

rtgh