ಹಲೋ ಸ್ನೇಹಿತರೆ, ಸಾರಿಗೆ ಇಲಾಖೆ ಕರ್ನಾಟಕ ಟ್ಯಾಕ್ಸಿಗಳ ಪ್ರಯಾಣ ದರದ ಕುರಿತು ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಅಥವಾ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಅಥವಾ ಹೆಚ್ಚುವರಿ ಕಾರ್ಯದರ್ಶಿಗಳು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಈ ಕುರಿತು ಪತ್ರದ ಮೂಲಕ ಮಾಹಿತಿ ನೀಡಲಾಗಿದೆ.
ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಕರ್ನಾಟಕ ರಾಜ್ಯಾದ್ಯಂತ ಮತ್ತು ಅಗ್ರಿಗೇಟರ್ ನಿಯಮಗಳಡಿ ಆಚರಣೆ ಮಾಡುವ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳ ಪುಯಾಣ ದರಗಳನ್ನು ಒಂದೇ ರೀತಿಯಲ್ಲಿ ನಿಗದಿಪಡಿಸಿರುವ ಬಗ್ಗೆ ಮಾಹಿತಿ ತಿಳಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರು ನಗರ ಮಿತಿಯೊಳಗೆ ಇರುವಂತಹ ಎಲ್ಲಾ ಟ್ಯಾಕ್ಸಿ ಸೇವೆಗಳಿಗೆ ‘ಒಂದು ನಗರ ಒಂದು ದರ’ ನೀತಿಯನ್ನು ಅನುಷ್ಠಾಗೊಳಿಸುವಂತೆ ಸಾರಿಗೆ ಇಲಾಖೆ ಅಧ್ಯಕ್ಷರು ಇವರು ಕೋರಿರುತ್ತಾರೆ.
ಇದನ್ನು ಓದಿ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!
ಈ ಕುರಿತು ಪರಿಶೀಲನೆ ನೆಡೆಸಿದ ನಂತರ, ಈಗಾಗಲೇ ಸರ್ಕಾರವು ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಮತ್ತು ಅಗ್ರಿಗೇಟರ್ ನಿಯಮಗಳಡಿ ಆಚರಣೆ ಮಾಡುವ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರಗಳನ್ನು ಒಂದೇ ಮಾದರಿಯಲ್ಲಿ ನಿಗದಿಪಡಿಸುವಂತೆ ಆದೇಶಿಸಲಾಗಿದೆ. ಪರಿಷ್ಕೃತ ದರಗಳನ್ನು ಅನುಷ್ಠಾನಗೊಳಿಸಿರುವ ಬಗ್ಗೆ ಪರಿಶೀಲಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಇತರೆ ವಿಷಯಗಳು:
ಇಂದಿನಿಂದ ಮಕ್ಕಳಿಗೆ ವಾರದ 6 ದಿನವೂ ಮೊಟ್ಟೆ ವಿತರಣೆ ಕಾರ್ಯ ಆರಂಭ!
ರೈತರಿಗೆ ಮಹತ್ವದ ಸುದ್ದಿ! 18ನೇ ಕಂತಿಗಾಗಿ ಈ 3 ಕೆಲಸ ಮಾಡಲು ಆದೇಶ ಹೊರಡಿಸಿದ ಸರ್ಕಾರ