ಹಲೋ ಸ್ನೇಹಿತರೆ, ರೈತರಿಗೆ ಸರ್ಕಾರ ಪ್ರಕೃತಿ ವಿಕೋಪಗಳಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಪಡೆಯಲು ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ತರಲಾಗಿತ್ತು. ಹಾಗೆಯೇ 2024-25 ಸಾಲಿನ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿತ್ತು. ಅನೇಕ ರೈತರು ಇನ್ನೂ ಅರ್ಜಿ ಸಲ್ಲಿಸದ ಕಾರಣ ಕೇಂದ್ರ ಸರ್ಕಾರವು ಹವಾಮಾನ ಆಧರಿತ ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ ತಿಂಗಳ ಅಂತ್ಯದವರೆಗೆ ವಿಸ್ತರಿಸಲು ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯದ ರೈತರಿಗೆ ಈ ಭಾರೀ ಮಳೆಯ ನಡುವೆ ಗುಡ್ ನ್ಯೂಸ್ ಸಿಕ್ಕಿದೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬೆಳೆ ವಿಮೆಗೆ ಆನ್ಸೆನ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾದ ಬಳಿಕ ಕೆಲ ಕಾರಣಗಳಿಂದ ರೈತರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ವಿಷಯವನ್ನು ಸಂಸತ್ತಿನಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೆ ತಂದಿದ್ದು, ನನ್ನ ಈ ಮನವಿಗೆ ಸ್ಪಂದಿಸಿ ಅವರು ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಿದ್ದಾರೆ. ರಾಜ್ಯದ ರೈತರು ಈ ಯೋಜನೆಯಡಿ ಸದುಪಯೋಗ ಪಡೆಯಲು ಅವಕಾಶ ಸಿಕ್ಕಂತಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ: 300 ರೂ.ಗೆ ಎಲ್‌ಪಿಜಿ ಸಿಲೆಂಡರ್! ಗ್ರಾಹಕರು ಇಂದೇ ಪ್ರಯೋಜನ ಪಡೆಯಿರಿ
ರಾಜ್ಯದ ರೈತಾಪಿ ವರ್ಗ ಕೇಂದ್ರ ಸರ್ಕಾರದ ಹವಾಮಾನ ಆಧಾರಿತ ಬೆಳೆ ವಿಮೆಯ ಯೋಜನೆಯ ಸದುಪಯೋಗ ಪಡೆಯುತ್ತಿದ್ದು ಪ್ರಸ್ತುತ ಆನ್ಲೈನ್ ಅರ್ಜಿ ಪ್ರಾರಂಭವಾದ ನಂತರ ಹಲವಾರು ತೊಡಕುಗಳಿಂದ ರೈತರಿಗೆ ದಾಖಲಾತಿಗಳೊಂದಿಗೆ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ.
ಈ ಕಾರಣಕ್ಕಾಗಿ ಜುಲೈ ತಿಂಗಳ ಅಂತ್ಯದಲ್ಲಿ ಮುಗಿಯುವ ಬೆಳೆ ವಿಮೆ ಅರ್ಜಿ ಅವಧಿಯನ್ನು ಆಗಸ್ಟ್ ತಿಂಗಳ ಅಂತ್ಯದವರೆಗೆ ವಿಸ್ತರಿಸಿ ರೈತಾಪಿ ವರ್ಗಕ್ಕೆ ಸಹಾಯ ಮಾಡಬೇಕೆಂದು ಗೌರವಾನ್ವಿತ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್‌ಅವರಲ್ಲಿ ಸಂಸತ್ತಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಮನವಿಗೆ ಸ್ಪಂದಿಸಿದ ಸಚಿವರಿಗೆ ಧನ್ಯವಾದವನ್ನು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ತಿಳಿಸಿದ್ದಾರೆ.
ಇತರೆ ವಿಷಯಗಳು:
ಆಭರಣ ಪ್ರಿಯರಿಗೆ ಬಿಗ್ ಶಾಕ್, ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ
ಕೊನೆಗೂ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3 ರಷ್ಟು ಏರಿಕೆ ಮಾಡಿದ ಸರ್ಕಾರ.!